ಮನ್ನೇಕೋಟೆ ಗ್ರಾಮದಲ್ಲಿ ಕಾರ್ತಿಕೋತ್ಸವದ ಅಂಗವಾಗಿ ಅದ್ದೂರಿಯಾಗಿ ಜರುಗಿದ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವ ಗ್ರಾಮದ ಸರ್ವಭಕ್ತರು ರಥೋತ್ಸವದಲ್ಲಿ ಭಾಗಿ.
ತಳಕು:: ಹೋಬಳಿಯ ಮನ್ನೇಕೋಟೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವದ ಅಂಗವಾಗಿ ಮನ್ನೇಕೋಟೆ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರಸ್ವಾಮಿ ರಥೋತ್ಸವ ಗ್ರಾಮದ ಸರ್ವಭಕ್ತರ ಸಮ್ಮುಖದಲ್ಲಿ ಸೋಮವಾರ ಬೆಳಗ್ಗೆ 10 ಗಂಟೆಗೆ ಮನ್ನೇಕೋಟೆ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಕಾರ್ತಿಕ ರಥೋತ್ಸವವನ್ನು ಅದ್ದೂರಿಯಾಗಿ ಹೂವಿನ ಹಾಗೂ ಬಣ್ಣದ, ಬಾವುಟ, ಪಟ, ಚಿತ್ತಾರ, ಹೂವಿನ, ಅಲಂಕಾರಗಳೊಂದಿಗೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ರಥೋತ್ಸವ ನೆರವೇರಿಸಲಾಯಿತು.
ಗ್ರಾಮದ ಗೊಂಚಿಕಾರ್ ಮನೆಯಿಂದ ನಿತ್ಯ ನೈವೇದ್ಯಗಳೊಂದಿಗೆ ಸದ್ಭಕ್ತಿಯಿಂದ ಮದುಮಗನ ರೀತಿಯಲ್ಲಿ ಸಿಂಗರಿಸಿಕೊಂಡು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಬಲಿ ಅನ್ನವನ್ನು ರಥದ ನೆಲೆಗೆ ತಂದು ಗ್ರಾಮಸ್ಥರು ಅನುಮತಿಯೊಂದಿಗೆ ಆಯಗಾರರ ಹಾಗೂ ತಳವಾರ ನಾಯಕ ಸಹಯೋಗದೊಂದಿಗೆ ಶ್ರೀ ರೇವಣಸಿದ್ದೇಶ್ವರ ಸ್ವಾಮಿಯ ರಥಚಕ್ರ ಗಳಿಗೆ ಗ್ರಾಮದ ಹಿತಕ್ಕೊಸ್ಕರ ಶ್ರೀ ಸ್ವಾಮಿಯ ಸಮರ್ಪಣೆ ಹಾಗೂ ಪೂಜಾ ಕೈ ಕಾರ್ಯಗಳನ್ನು ನೆರವೇರಿಸಿ ಮಹಾಮಂಗಳಾರತಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಗ್ರಾಮದ ಸರ್ವಭಕ್ತರು ಪಾಲ್ಗೊಂಡು ರಥೋತ್ಸವದ ಮುಂದೆ ನಂದಿಕೋಲು ಕುಣಿತ ವಿವಿಧ ಮಂಗಳವಾದ್ಯಗಳು ಮತ್ತು ಶ್ರೀ ರೇವಣಸಿದ್ದೇಶ್ವರ ಸ್ವಾಮಿಗೆ ಜೈ ಅನ್ನುವ ಜೈಕಾರ ಮುಳಗಿದವು ದಾರಿ ಉದ್ದಕ್ಕೂ ಮಹಿಳೆಯರು ನೀರು ಹಾಕಿ ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ರಥೋತ್ಸವಕ್ಕೆ ವಿವಿಧ ಬಣ್ಣಗಳಿಂದ ತುಂಬಿದ ದೊಡ್ಡ ದೊಡ್ಡ ಹೂವಿನ ಹಾರಗಳೊಂದಿಗೆ ಹಣ್ಣು ಕಾಯಿ ನೀಡುವ ಮೂಲಕ ಭಕ್ತಿ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ದಳಪತಿ ರಾಜಣ್ಣ, ಎಚ್ ಎಸ್ ನಾಗರಾಜ್, ಶಾಂತವೀರಣ್ಣ, ರಾಜಶೇಖರಪ್ಪ, ಗುತ್ತಿಗೆದಾರ್ ವಿಜೇಂದ್ರಪ್ಪ, ಗ್ರಾಮ ಪಂಚಾಯತಿಯ ಅಧ್ಯಕ್ಷೆ ಪ್ರತಿಭಾ ಈ ವಿಜಯ್ ಕುಮಾರ್, ಸದಸ್ಯರಾದ ಪೆದ್ದಕ್ಕ ಓ. ನಾಗೇಶ್ , ರವಿಕುಮಾರ್, ಚಂದಯ್ಯ, ಗೀತಮ್ಮ ಬಸವರಾಜ್, ಸೇರಿದಂತೆ ಸಮಸ್ತ ಮನ್ನೇಕೋಟೆ ಗ್ರಾಮಸ್ಥರು ಇದ್ದರು