ಚಳ್ಳಕೆರೆ: ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭ ಎಂದೆ ಕರೆಯಿಸಿಕೊಳ್ಳುವ ಪತ್ರಿಕಾರಂಗ ಸಾಮಾಜಿಕ ಬದ್ದತೆಯನ್ನು ಉಳುಸಿಕೊಳ್ಳಲು ಸ್ವತಂತ್ರö್ಯವಾಗಿ ನೈಜತೆಯನ್ನು ಕಾಪಾಡಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯವಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಪಂಚಾಯಿತ್ ಸಭಾಗಂಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಆಯೋಜಿಸಿದ್ದ ಪ್ರತಿಕಾ ದಿನಾಚರಣೆಯನ್ನು ಕುರಿತು ಮಾತನಾಡಿದರು. ಸಮಾಜಕ್ಕೆ ಸುದ್ದಿಕೊಡುವ ಭರದಲ್ಲಿ ಸುದ್ದಿಗಳನ್ನು ತಿರುಚುವುದು ಬೇಡ, ಸಾರ್ವಜನಿಕರಿಗೆ ನೈಜಸುದ್ದಿ ತಲುಪಿಸುವ ಕೆಲಸವಾಗಬೇಕು. ಡಾ.ಬಿ.ಆರ್. ಅಂಬೇಡ್ಕರ್ ಸಹ ಪತ್ರಕರ್ತರಾಗಿದ್ದರು ಹೆಮ್ಮೆಯ ವಿಚಾರವಾಗಿದ್ದು ಸೂರ್ಯ ಚಂದ್ರ ಇರುವವರೆಗೆ ಅವರ ಜೀವಂತಾಗಿರುವAತಹ ಕೊಡುಗೆಗಳನ್ನು ಸಾಮಾಜಕ್ಕೆ ನೀಡಿದ್ದಾರೆ. ಅದೇ ರೀತಿ ಪತ್ರಕರ್ತರೂ ದಿನಿತ್ಯ ಹಾಗೂ ಹೋಗುಗಳ ಹಾಗೂ ಸ್ಥಳೀಯ ಪತ್ರಕರ್ತರನ್ನು ಗುರುತಿಸುವ ಕೆಲಸವಾಗುತ್ತದೆ, ಗ್ರಾಮೀಣ ಪತ್ರಕರ್ತರಿಗೆ ಬಸ್ ಹಾಗೂ ನಿವೇಶನ ನೀಡುವ ಬಗ್ಗೆ ಚರ್ಚಿಸಿ ಜಾರಿಗಳಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಸಂವಿಧಾನ ನಾಲ್ಕನೆ ಅಂಗವಾಗಿರುವ ಪತ್ರಿಕಾರಂಗ ಉತ್ತಮ ಕಾರ್ಯ ಮಾಡುವ ಮೂಲಕ ಪಕ್ಷಬೇಧ ಭಾವ ಮಾಡದೆ ಸಮಾನ ಸ್ಥಿತಿಯಲ್ಲಿ ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದವರ ನಿಲುವಿಗೆ ನಿಲ್ಲಬೇಕು, ಪತ್ರಕರ್ತರಲ್ಲಿ ಕೇವಲ ಬೆಳಣಿಕೆಯಷ್ಟು ಮಾತ್ರ ಪ್ರತಕರ್ತರಿಗೆ ಮಾಶಸನಾ ನೀಡುತ್ತಿದೆ, ಇನ್ನೂ ಸುದ್ದಿಗಾಗಿ ತೆರಳುವ ಪತ್ರಕರ್ತನಿಗೆ ಬಸ್‌ಪಾಸ್ ನೀಡುವಂತೆ ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಟ್ಟಿದ್ದೆವೆ ಆದರೆ ಸ್ಪಂಧನೆ ಇಲ್ಲ, ನಿವೇಶನ ನೀಡುವ ಕಾರ್ಯ ಹಾಗಬೇಕು, ಎಂದು ಹೇಳಿದರು.
ಡಿವೈಎಸ್‌ಪಿ ಬಿಟಿ.ರಾಜಣ್ಣ ಮಾತನಾಡಿ, ಸಾಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಪತ್ರಿಕೆ ಮಾಡುತ್ತಿದೆ ಅಂತಹ ಪತ್ರಿಕಾ ರಂಗವನ್ನು ನಾವು ಸಂವಿಧಾನದ ನಾಲ್ಕನೆ ಅಂಗವಾಗಿ ಪರಿಗಣಿಸಿದ್ದೆವೆ, ಪೊಲೀಸ್ ಇಲಾಕೆ ಖಾಕಿ ತೊಟ್ಟು ಸಾರ್ವಜನಿಕರ ಸೇವೆ ಮಾಡಿದರೆ ಖಾಕಿ ಇಲ್ಲದೆ ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸಾಮಾಜದ ಹಾಗುಹೊಗುಗಳ ಬಗ್ಗೆ ಮಾಹಿತಿ ಪಡೆದು ಬೆಳಕು ಚೆಲ್ಲುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ, ಅದರಂತೆ ಪತ್ರಕೆಗಳ ಪಾತ್ರ ಬಹಳಮುಖ್ಯವಾಗಿದೆ ಎಂದರು.
ರಾಷ್ಟ್ರೀಯ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ವಿಜಯಕರ್ನಾಟಕ ವರದಿಗಾರ ಎಂ.ಎನ್. ಅಹೋಬಲಪತಿ ಮಾತನಾಡಿ ಡಾ .ಬಿ.ಆರ್ ಅಂಬೇಡ್ಕರ್ ಸಹ ಮೂರು ಪತ್ರಿಕೆಗಳನನ್ನು ನಡೆಸುವ ಮೂಲಕ ಸಾಮಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಹೋರಾಡಿದ ಮಾಹನ್ ವ್ಯಕ್ತಿಯಾಗಿದ್ದಾರೆ. ಅದರಂತೆ ನಗರ ಹಾಗೂ ಗ್ರಾಮೀಣ ಪತ್ರಕರ್ತರಿಗೆ ಯಾವುದೇ ವೇತನ ನೀಡದೆ ಇರುವುದರಿಂದ ಸಂಕಷ್ಟದಲ್ಲಿ ಸುದ್ದಿ ಸಂಗ್ರಹಿಸಿ ಕಳಿಸಬೇಕಾದ ಅನಿವಾರ್ಯತೆ ಇದೆ ಆದ್ದರಿಂದ ಉಚಿತ ಬಸ್‌ಪಾಸ್ ಹಾಗೂ ಯಾವುದೇ ಯೋಜನೆಯಡಿಯಲ್ಲಿ ನಿವೇಶ ನೀಡಬೇಕಿದೆ. ಇಂದು ಪ್ರತಿಕೆಗಳೂ ಸಹ ಸಂಕಷ್ಟಕ್ಕೆ ಸಿಲುಕಿದ್ದು ಕೊಂಡು ಓದುಗಳ ಸಂಖ್ಯೆಯಾಗಿದ್ದು ಪತ್ರಿಕೆಗಳನ್ನು ಕೊಂಡು ಓದಿದಾಗ ಮಾತ್ರ ಪತ್ರಿಕೆಗಳ ಉಳಿಯಲು ಸಾಧ್ಯ ಎಂದರು.
ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ಪತ್ರಕರ್ತ ಹೆಂಜೇರಪ್ಪ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಪತ್ರಿಕೆ ವಿತರಕರು ಹಾಗೂ ಹಂಚಿಕೆ ಮಾಡುವವರನ್ನು ಅಸಂಘಟಿತ ಕಾರ್ಮಿಕರು ಎಂದು ಘೋಷಣೆ ಮಾಡಿದ್ದು ಪತ್ರಿಕೆ ವಿತರಣೆ ಮಾಡುವಾಗ ಮೃತ ಪಟ್ಟರೆ 2 ಲಕ್ಷ ರೂ ಪರಿಹಾರ ದೊರೆಯಲಿದೆ, ಬಿಪಿಎಲ್ ಪಡಿತರ ವಂಚಿತರ ಪತ್ರಿಕಾ ವಿತರಕರಿಗೆ ಹಾಗೂ ಹಂಚಿತರಾರರಿಗೆ ಬಿಪಿಎಲ್ ಪಡಿತರ ಚೀಟಿ ನೀಡಿದರೆ 5 ಲಕ್ಷ ರೂ ವರೆಗೆ ಅವರ ಕುಟುಂಬಕ್ಕೆ ಉಚಿತ ಆರೋಗ್ಯ ಸೇವೆ ದೊರೆಯಲಿದೆ. ಇಂದಿನ ಪ್ರಸ್ತುತ ದಿನಗಳಲ್ಲಿ ದಿನಪತ್ರಿಕೆಗಳು ಸಂಕಷ್ಟದಲ್ಲಿದ್ದು ಎಸ್ಸಿ-ಎಸ್ಟಿ ಪತ್ರಿಕೆಗಳಿಗೆ ನಾಲ್ಕು ಪುಟ ಜಾಹಿರಾತು ನೀಡಿದ್ದ ಸರಕಾರ ಎರಡು ಪುಟಗಳಿಗೆ ಇಳಿಸಿದ್ದು ನಾಲ್ಕು ಜಾಹಿರಾತು ಹಾಗೂ ಗಡಿ ಭಾಗದ ಪತ್ರಿಕೆಗಳು ನೀಡ ಬೇಕಾದ ಜಾಹಿರಾತು ಸೌಲಭ್ಯಗಳನ್ನು ಸರಕಾರದ ನಿಡಬೇಕು ಕೋಲಾರದ ಗಡಿ ಭಾಗದಲ್ಲಿ ಜಾಹಿರಾತು ನೀಡುತ್ತಿರುವುದು ಗಮನ ಸೆಳೆಯುವಂತೆ ಶಾಸರ ಗಮನ ಸೆಳೆದರು.
ಸಾಹಿತಿ, ಪತ್ರಕರ್ತರ ಕರ‍್ಲಕುಂಟೆ ತಿಪ್ಪೆಸ್ವಾಮಿ ಮಾತನಾಡಿ, ನಾಡಿನ ಎಲ್ಲಾ ಸಮುದಾಯಗಳ ಜತೆಗೆ ಸಾಮರಸ್ಯ ಉಳಿಸಿಕೊಂಡು ಸಾಮಾಜದಿಂದ ದೂರವಿರುವ ವಿವಿಧ ಸಮುದಾಯದ ಏಳಿಗೆಗೆ ಪತ್ರಿಕೆ ಶ್ರಮಿಸುತ್ತಿದೆ. ಸಾಮಾಜದ ಅಂಕುಡೊAಕುಗಳನ್ನು ತಿದ್ದುವ ಮೂಲಕ ಸಾಮಾಜಮುಖಿ ಕಾರ್ಯ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ, ಎಂದು ಹೇಳಿದರು.
ಈದೇ ಸಂಧರ್ಭದಲ್ಲಿ ಕನ್ನಡರಾಜ್ಯೊತ್ಸವ ಪಶಸ್ತಿ ಪುರಸ್ಕೃತ ಪಿ.ತಿಪ್ಪೇಸ್ವಾಮಿ, ಡಿವೈಎಸ್ ಪಿ ರಾಜಣ್ಣ, ಡಾ.ಚಂದ್ರನಾಯ್ಕ. ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ಪತ್ರಕರ್ತ ಹೆಂಜೇರಪ್ಪ, ರಾಷ್ಟ್ರೀಯ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ವಿಜಯಕರ್ನಾಟಕ ವರದಿಗಾರ ಎಂ.ಎನ್. ಅಹೋಬಲಪತಿ, ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿದರು
ಇದೇ ಸಂದರ್ಭದಲ್ಲಿ ವಿವಿಧ ಸಾಧಕ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜೆ.ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷ ಆನಂದ್ ಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಖಜಾಂಚಿ ಡಿ.ಕುಮಾರಸ್ವಾಮಿ, ವೀರೇಶ್ ಅಪ್ಪು, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ತಾಲೂಕು ಕರವೇ ಅಧ್ಯಕ್ಷ ಸ್ವಪ್ನ ವೆಂಕಟೇಶ್, ಸಮಾಜ ಸೇವಕ ಸೈಯಾದ್, ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೋಟೋ, ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರತಿಕಾ ದಿನಾಚರಣೆಯ ಉದ್ಘಾಟನೆಯನ್ನು ಶಾಸಕ ಟಿ.ರಘುಮೂರ್ತಿ ನೆರೆವೆರಿಸಿದರು.