ಚಳ್ಳಕೆರೆ : ಗೌರಸಮುದ್ರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೌರಸಮುದ್ರ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ ಗಂಗಾಧರ, ಉಪಾಧ್ಯಕ್ಷರಾಗಿ ಎಂಜಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ.ಅಂಗಡಿ ಬಾಷಾಸಾಬ್. ಪಾಲಯ್ಯ ರಾಮಾಂಜನೇಯ, ಎಂ.ಜಿ.ಸತೀಶ್, ವೆಂಕಟೇಶ್, ಟಿ.ಶಶಿಕುಮಾರ್, ಸುಮಿತ್ರಮ್ಮ, ಸಾಂತಮ್ಮ, ಎಸ್.ಮಂಜಮ್, ಜಿ.ಟಿ.ನಿರಂಜನರೆಡ್ಡಿ, ಪಿ.ಗಂಗಾಧರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ನೂತನವಾಗಿ ನಿದೇರ್ಶಕರಾಗಿ ಆಯ್ಕೆಯಾದ ಟಿ.ಶಶಿಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಸಹಕಾರ ಸಂಘಗಳಿAದ ಗ್ರಾಮೀಣ ಭಾಗದ ರೈತರ ಜೀವನ ಹಸನಾಗುತ್ತದೆ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳಲ್ಲಿ ಮರುಪಾವತಿ ಹಾಗೂ ಕಾಲ ಕಾಲಕ್ಕೆ ವ್ಯವಹಾರ ಸರಿಯಾಗಿ ಇಟ್ಟುಕೊಳ್ಳಬೇಕು ಇದರಿಂದ ಆರ್ಥೀಕ ಹೊರೆಗಿಂತ ಆರ್ಥೀಕವಾಗಿ ಲಾಭ ಪಡೆಯಬಹುದು ಎಂದರು.