ಚಳ್ಳಕೆರೆ : ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕರವರಿಗೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಚರ್ಮದ ಕರಕುಶಲ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಜೀವನೋಪಾಯ ಮಾಡಲು ಲಿಡ್ಕರ್ ವತಿಯಿಂದ ದೊರೆಯುವ ವಸತಿ, ಸಾಲ, ಮತ್ತು ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿದ್ದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸೇರಿದಂತೆ ಇತರೆ ಜನಾಂಗದವರು ಕೂಡ ವಾಸಿಸುತ್ತಿದ್ದು ಗ್ರಾಮದಲ್ಲಿ ಸುಮಾರು 1957-58ನೇ ಸಾಲಿನಲ್ಲಿ ಬಿ ರಾಚಯ್ಯನವರು ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಸಮಯದಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯಲ್ಲಿ ಚರ್ಮದ ಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಶಂಕು ಸ್ಥಾಪನೆ ಮಾಡಿದ್ದರು.
ಈ ಕಟ್ಟಡದಲ್ಲಿ ಪರಿಶಿಷ್ಟ ಜಾತಿಯ ಕಾಲೋನಿಯ ನಿರುದ್ಯೋಗಿಗಳಾದ ಸುಮಾರು 130 ಜನರಿಗೆ ಈ ಕಟ್ಟಡದಲ್ಲಿ ಲಿಡ್ಕರ್ ವತಿಯಿಂದ ತರಬೇತಿಯನ್ನು ನೀಡಲಾಗಿತ್ತು ಈ ಕಾಲೋನಿಯ ಬಹಳಷ್ಟು ಕುಟುಂಬಗಳ ಮೂಲ ಕಸುಬು ಚರ್ಮದ ಕಸುಬಾಗಿದ್ದು ಈಗ ಬಹಳ ಮುಖ್ಯವಾಗಿ ತರಬೇತಿ ಪಡೆದವರಿಗೆ ಜೀವನೋಪಾಯ ಮಾಡಲು ಲಿಡ್ಕರ್ ವತಿಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಫಲಾನುಭವಿಗಳ ಬೇಡಿಕೆಯಾಗಿದೆ ಎಂದರು.
ಅಲ್ಲದೆ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಕ್ಷೇತ್ರಗಳು ಬಹಳ ಹಿಂದುಳಿದ ಕ್ಷೇತ್ರಗಳಾಗಿದ್ದು ಉದ್ಯೋಗವಿಲ್ಲದೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಬರಗಾಲ ತಾಲೂಕು ಕ್ಷೇತ್ರವಾಗಿ ಆಯ್ಕೆಯಾಗಿವೆ ಈಗಾಗಲೇ 2011 2016 2018 ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿಯ ಮುಂದೆ ಶಾಂತಿಯುತವಾಗಿ ಧರಣಿ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಈ ಗ್ರಾಮಕ್ಕೆ ಕಾಯಂ ತರಬೇತಿ ಮತ್ತು ಉತ್ಪಾದನಾ ಕೇಂದ್ರ ಮಂಜೂರು ಮಾಡಬೇಕು ಈ ಬಾರಿ ಇಲಾಖೆಯಿಂದ ಫಲಾನುಭವಿಗಳಿಗೆ ದೊರೆಯುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೇಡಿಕೆಗಳು: ಹಿರೇಹಳ್ಳಿ ಗ್ರಾಮದ ರಿ.ಸರ್ವೆ ನಂ291ರಲ್ಲಿ ತರಬೇತಿ ಪಡೆದ ಎಲ್ಲಾ ಫಲಾನುಭವಿಗಳಿಗೆ ಲೀಡ್ಕರ್ ವತಿಯಿಂದ ನಿವೇಶನ ಮಂಜೂರು ಮಾಡುವುದು
ಈ ಗ್ರಾಮಕ್ಕೆ ತರಬೇತಿ ಮತ್ತು ಉತ್ಪಾದನಾ ಕೇಂದ್ರ ಮಂಜೂರು ಮಾಡುವುದು
ಸಾಂಸ್ಕೃತಿಕ ಭವನದ ಕಟ್ಟಡ ಕಟ್ಟಲು ಖಾಲಿ ನಿವೇಶನವಿದ್ದು ಸರ್ಕಾರ ಕೂಡಲೇ ಕಾಮಗಾರಿ ಕೈಗೊಳ್ಳಬೇಕು.
ಈ ಸಂದರ್ಭದಲ್ಲಿ ವಕೀಲರಾದ ಆರ್ ರುದ್ರಮನಿ ಗ್ರಾಮ ಪಂಚಾಯಿತಿ ಸದಸ್ಯ ಎಸ್ ರಾಜಣ್ಣ ಎಚ್ ತಿಪ್ಪೇಸ್ವಾಮಿ ಎಸ್ ಮಲ್ಲೇಶಪ್ಪ ತಿಪ್ಪೇಸ್ವಾಮಿ ಎನ್ಎಸ್ ತಿಮ್ಮಣ್ಣ ಶಾಂತಪ್ಪ ಶಿವಲಿಂಗಪ್ಪ ಟಿ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.