ಉಚಿತ ಆರೋಗ್ಯ ತಪಾಸಣೆಯ ಶಿಬಿರಕ್ಕೆ ಚಾಲನೆ ನೀಡಿದ ಕಟ್ಟಡ ಕಾರ್ಮಿಕ ಸಂಘದ ಹೋಬಳಿ ಅಧ್ಯಕ್ಷ ಬಿ ತಿಪ್ಪೇಸ್ವಾಮಿ
ನಾಯಕನಹಟ್ಟಿ:: ನ.27.
ಪ್ರತಿಯೊಬ್ಬ ನೊಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಷಣೆಯನ್ನು ಏರ್ಪಡಿಸಲಾಗಿದೆ ಎಂದು ಕಟ್ಟಡ ಕಾರ್ಮಿಕರ ಸಂಘದ ಹೋಬಳಿ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ. ತಿಪ್ಪೇಸ್ವಾಮಿ ರವರು ಹೇಳಿದ್ದಾರೆ.
ಸೋಮವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರ ಮಠದ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಅಶ್ವಿನಿ ಆಸ್ಪತ್ರೆ ತುಮಕೂರು ಇವರು ಉಚಿತ ಆರೋಗ್ಯ ತಪಾಸಣೆಗೆ ಚಾಲನೆ ನೀಡಿ ಮಾತನಾಡಿದ್ದಾರೆ. ಹೋಬಳಿಯ ನೋಂದಾಯಿತ ಕಟ್ಟಡ ಪ್ರತಿಯೊಬ್ಬ ಕಾರ್ಮಿಕರು ಉಚಿತ ಆರೋಗ್ಯ ಶಿಬಿರದಲ್ಲಿ ತಪಾಸಣೆಯನ್ನು ಮಾಡಿಸಿಕೊಂಡು ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಕಾರ್ಮಿಕರಲ್ಲಿ ಮನವಿಯನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹೋಬಳಿ ಅಧ್ಯಕ್ಷ ಚನ್ನಬಸಯ್ಯನಹಟ್ಟಿ ಬಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಎನ್ ಸಿ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೈಯದ್ ದಾದಾಪೀರ್, ಖಜಾಂಚಿ ರೇಖಲಗೇರೆ ಮಲ್ಲಯ್ಯ, ಸದಸ್ಯ ಅಫ್ಜಲ್ ಜಲೀಲ್, ಖಾನಹೊಸಳಿಯ ಕಾರ್ಮಿಕ ಮುಖಂಡರಾದ ಬಿ ರಾಘವೇಂದ್ರ ಕಲೀಲ್ ಖಾನ್, ಮತ್ತು ತುಮಕೂರು ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ. ಆಸೀದ್ ಡಾ .ಸಂಜಯ್, ಪ್ರಭಾ ,ಅರ್ಚನಾ, ಮಾಲ, ಸಾವಿತ್ರಿ, ಕೆ ಹರೀಶ್, ರೋಹಿತ್, ಪ್ರತಾಪ್ ,ಪವನ್, ಕಟ್ಟಡ ಕಾರ್ಮಿಕರು ಇದ್ದರು