ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡುವ ರೀತಿ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಪಟ್ಟಣ ಪಂಚಾಯತಿ ಪ್ರಭಾರಿ ಮುಖ್ಯಧಿಕಾರಿ ಎಂ ಶಿವಕುಮಾರ್ ಅಭಿಪ್ರಾಯ ಪಟ್ಟರು

ಅವರು ಭಾನುವಾರ ಪಟ್ಟಣ ಪಂಚಾಯತಿಯ ಕಾರ್ಯಾಲಯದಲ್ಲಿ ಸಂವಿಧಾನ ಸಮರ್ಪಣ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ 22 ಸದಸ್ಯರನ್ನು ಒಳಗೊಂಡಂತೆ ಎರಡು ವರ್ಷ 11 ತಿಂಗಳು 18 ದಿನಗಳ ಕಾಲ ಸಂವಿಧಾನವನ್ನು ರಚನೆ ಮಾಡಿ 1949 ನವಂಬರ್ 26ರಂದು ಸಂವಿಧಾನ ಸಮರ್ಪಣ ದಿನವಾಗಿ ಆಚರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಸದಸ್ಯ ದುರುಗಪ್ಪ, ಪ್ರಭಾರಿ ಮುಖ್ಯ ಅಧಿಕಾರಿ ಎಂ ಶಿವಕುಮಾರ್, ಸಿಬ್ಬಂದಿಗಳಾದ ಟಿ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಕೆ .ವಿ. ತಿಪ್ಪೇಸ್ವಾಮಿ. ಸೇರಿದಂತೆ ಪಟ್ಟಣ ಪಂಚಾಯತಿಯ ಪೌರಕಾರ್ಮಿಕರು ಇದ್ದರು

About The Author

Namma Challakere Local News
error: Content is protected !!