ಚಳ್ಳಕೆರೆ : ಬೆಳಕಿನ ಹಬ್ಬ ದೀಪಾವಳಿಗೆ ಬಯಲು ಸೀಮೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ, ಹಬ್ಬಕ್ಕೆ ದೀಪಗಳ ಖರೀದಿ, ಹಾಗೂ ಪಟಾಕಿ ಖರೀದಿ ಬಲೂ ಜೋರಾಗಿದೆ.
ಸಾರ್ವಜನಿಕರಿಗೆ ಕೊಂಚ ಹೊರೆಯಾದರೂ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ದೀಪ ಬೆಳಗುವುದು ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ಇಲ್ಲಿನ ಜನರೇ ಸಾಕ್ಷಿಯಾಗಿದ್ದಾರೆ.
ಹೌದು ನಗರದ ಬಿಎಂಜಿಎಚ್‌ಎಸ್ ಮೈದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟಾಕಿ ಅಂಗಡಿ ಮಳಿಗೆಗಳು ಹಾಕಿದ್ದ ವ್ಯಾರಸ್ಥರ ನಿರೀಕ್ಷೆ ಹುಸಿಮಾಡದೆ ಚಳ್ಳಕೆರೆ ಜನತೆ ತಾ ಮುಂದು ನೀ ಮುಂದು ಎಂದು ಪಟಾಕಿ ಖರೀದಿಯಲ್ಲಿ ನಿರತರಾಗಿದ್ದಾರೆ.
ಇನ್ನೂ ಸರಕಾರ ಘೋಷಣೆ ಮಾಡಿದ ಹಸಿರು ಪಟಾಕಿಯನ್ನೆ ಮಾರಾಟ ಮಾಡಬೇಕು ಎಂಬ ಘೊಷಣೆಗೆ ಕೆಲವು ಅಂಗಡಿಗಳಲ್ಲಿ ಮಾತ್ರ ಹಸಿರು ಪಟಾಕಿ ಜೊತೆ ನಿಷೇಧಿತ ಪಟಾಕಿ ಮಾರಾಟ ಮಾಡುವುದು ಕಂಡು ಬಂದಿದ್ದು ಇದರ ಬೆನ್ನಲೆ ಎಚ್ಚೆತ್ತು ಕೊಂಡ ನಗರಸಭೆ ಪರಿಸರ ಅಧಿಕಾರಿಗಳು ಹಾಗೂ ಪೌರಾಯುಕ್ತರ ತಂಡ ಪಟಾಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು 15ಸಾವಿರದಷ್ಟು ನಿಷೇಧಿತ ಪಟಾಕಿಗಳನ್ನು ಆಕ್ರಮಿಸಿಕೊಂಡು ಅಂಡಿಗಳಿ ಮಳಿಗೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಪೌರಾಯುಕ್ತ ಸಿ.ಚಂದ್ರಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಸಾರ್ವಜನಿರಕ ಹಿತ ರಕ್ಷಣೆಗಾಗಿ ಸರಕಾರ ಹಸಿರು ಪಟಾಕಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇನ್ನು ಪ್ರತಿ ಪಟಾಕಿಗಳ ಮೇಲೆ ಹಸಿರು ಪಟಾಕಿ ಎಂಬ ಲೋಗೋ ಕೂಡ ಮುದ್ರಿತವಾಗಿದೆ, ಕ್ಯೂಆರ್ ಕೋಡ್‌ವುಳ್ಳ ಪಟಾಕಿ ಬಾಕ್ಸ್ ಪರೀಶಿಲಿಸಿ ಪಟಾಕಿ ಖರೀದಿಸಿ, ನಿಮ್ಮ ಮಕ್ಕಳ ಹಾಗೂ ನಿಮ್ಮ ಕುಟುಂಬದ ರಕ್ಷಣೆಗೆ ಬದ್ದರಾಗಿರಿ ದೀಪಾವಳಿ ಬೆಳಕಿನ ಹಬ್ಬ ಎಲ್ಲಾರ ಬಾಳಲಿ ಬೆಳಕು ತರಲಿ ಎಂದು ತಿಳಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಪೌರಾಯುಕ್ತರಾದ ಸಿ.ಚಂದ್ರಪ್ಪ, ಜಿಲ್ಲಾ ಪರಿಸರ ಅಧಿಕಾರಿ ಪ್ರಕಾಶ್, ಉಪ ಪರಿಸರ ಅಧಿಕಾರಿ ರಾಜೇಶ್, ಚಳ್ಳಕೆರೆ ನಗರಸಭೆ ಪರಿಸರ ಅಧಿಕಾರಿ ನರೇಂದ್ರಬಾಬು, ಗಣೇಶ್, ದಾದಾಪೀರ್, ಇತರ ಸಿಬ್ಬಂದಿ ವರ್ಗ ಹಾಜರಿದ್ದರು.

About The Author

Namma Challakere Local News
error: Content is protected !!