ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಪೌರಕಾರ್ನಿಕರು ಹೋರಾಟ ಮಾಡುತ್ತ ಬಂದಿದ್ದೆವೆ ಆದರೆ ನಮ್ಮನ್ನು ಆಳುವ ಸರಕಾರಗಳು ಮಾತ್ರ ನಮ್ಮ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳುತ್ತಿವೆ ಎಂದು ಕರ್ನಾಟಕ ರಾಜ್ಯ ನಗರಸಭೆ ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಆರೋಪಿಸಿದ್ದಾರೆ.

ಅವರು ನಗರದ ನಗರಸಭೆ ಕಛೇರಿ ಮುಂಬಾಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆ ಘೊಷಣೆ ಯಲ್ಲಿ ಮೊದಲ ಹಂತವಾಗಿ ಪೌರಕಾರ್ಯಮಿಕರ ಸಂಕಷ್ಟಕ್ಕೆ ದಾವಿಸುವುದು ಎಂದು ಘೋಷಿಸಿತು ಆದರೆ ಈವರೆಗೆ ಹೊರಗುತ್ತಿಗೆ ಪೌರ ಕಾರ್ಮಿಕರ ಬಗ್ಗೆ ಗಮನಹರಿಸಿಲ್ಲ. ಕನಿಷ್ಠ ಜೀವನ‌ ನಡೆಸುವ ಪೌರಕಾರ್ಮಿಕರ ರಕ್ಷಣೆಗೆ ದಾವಸಬೇಕು ಎಂದರು.

ಇನ್ನೂ ಪೌರಕಾರ್ಮಿಕರ ವಾಹನ ಚಾಲಕರಾದ ಪೆನ್ನೇಶ್ ಮಾತನಾಡಿ,
ನುಡಿದಂತೆ ನಡೆಯಿರಿ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೊಳಿಸಿ
ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯ ಘೋಷಣೆಯಂತ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ
ಪೌರಕಾರ್ಮಿಕರ ಮಾದರಿಯಲ್ಲಿ ನೇರಪಾವತಿಗೊಳಪಡಿಸಲು ಆಗ್ರಹಿಸಿ ನ15 ರಂದು ರಾಜ್ಯಾದ್ಯಂತ ಉಸ್ತುವಾರಿ ಸಚಿವರ
ಕಚೇರಿ ಎದುರು ಧರಣಿ ಮಾಡಲಾಗುತ್ತದೆ ಎಂದರು.

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರನ್ನು ಖಾಯಂ ಮಾಡಲು
ಮುಂದಾಗಿರುವ ಸರಕಾರ ಪೌರಕಾರ್ಮಿಕರೊಟ್ಟಿಗೆ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ವಾಹನ
ಚಾಲಕರು,ನೀರುಸರಬರಾಜು ಸಹಾಯಕರು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರು ಸೇರಿದಂತೆ 15ಸಾವಿರಕ್ಕು
ಹೆಚ್ಚು ನೌಕರರನ್ನು ಗುತ್ತಿಗೆಯಲ್ಲಿ ಉಳಿಸಲಾಗಿದೆ.

ನಗರಗಳ ಸ್ವಚ್ಛತೆ ಹಾಗೂ ಕುಡಿಯುವ ನೀರು ನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಪಾತ್ರ
ಮಹತ್ವದ್ದಾಗಿದೆ. 2017ರಲ್ಲಿ ಪೌರಕಾರ್ಮಿಕರ ನೇಮಕಾತಿಗೊಳಿಸಿದಾಗಲೂ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ
ಉಳಿಸಲಾಯಿತು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಕಸ ಸಾಗಿಸುವ ವಾಹನ ಚಾಲಕರು ಲೋಡರ್ಸ್, ಕ್ಲೀನರ್ಸ್
ಹೆಲ್ಲರ್ಸ್ ಯೂಜಿಡಿ ಕಾರ್ಮಿಕರು ಸಹ ಪೌರಕಾರ್ಮಿಕರೆಂದು ಗುರುತಿಸಲಾಗಿದೆ.

ಆದಾಗಿಯೂ ನಗರಾಭಿವೃದ್ಧಿ
ಅಧಿಕಾರಿಗಳು ತಾರತಮ್ಯ ಎಸಗಿ ನೇರನೇಮಕಾತಿ ಹಾಗೂ ನೇರಪಾವತಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಅನ್ಯಾಯ
ಎಸಗಿದ್ದಾರೆ. ಈಗಲೂ ಸಹ ಹೊರಗುತ್ತಿಗೆ ನೌಕರರನ್ನು ಗುತ್ತಿಗೆಯಲ್ಲಿ ಮುಂದುವರಿಸುವ ಸರಕಾರದ ನೀತಿ
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರ ಮಧ್ಯೆ
ಒಡೆದಾಳುವ ನೀತಿ ಅನುಸರಿಸುವುದು ಶೋಭೆಯಲ್ಲ.

ದಿನಾಂಕ :12/1/2013
ಕಳೆದ ಬಿಜೆಪಿ ಸರಕಾರದಲ್ಲಿ ತೀವ್ರ ಹೋರಾಟದ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ
ನೌಕರರನ್ನು ನೇರಪಾವತಿಗೊಳಿಸುವ ಸಂಬಂಧ ಕಡತ ಹಣಕಾಸು ಇಲಾಖೆಯ ಪರಿಶೀಲನೆಯಲ್ಲಿರುವಾಗಲೇ
ವಿಧಾನಸಭೆ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಿ ಕಡತ ನಗರಾಭಿವೃದ್ಧಿ ಇಲಾಖೆಗೆ ವಾಪಸ್ ಆಗಿದ್ದು, ಈಗ
ಮರಳಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. (ಕಡತ ಸಂಖ್ಯೆ : UDD/219/GEL/2023)(UDD/GEL/137-
22)ಈ ಸಂಬಂದ ಕಡತವನ್ನು ಸಂಪುಟದಲ್ಲಿ ಅಂಗೀಕರಿಸುವಂತೆ ಕೋರುತ್ತೇವೆ.

ಕಳೆದ ವಿಧಾನಸಭಾ ಚುನಾವಣಾ
ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ
ನೌಕರರನ್ನು ನೇರಪಾವತಿಗೆ ತರಲು ನುಡಿದಂತೆ ನಡೆಯಿರಿ ಎಂಬ ಘೋಷಣೆಯೊಂದಿಗೆ ನ 15 ರಂದು ರಾಜ್ಯಾದ್ಯಂತ
ಅಯಾ ಉಸ್ತುವಾರಿ ಸಚಿವರ ಕಚೇರಿ ಎದುರು ಒಂದು ದಿನದ ಧರಣಿ ನಡೆಸಿ ಸರಕಾರವನ್ನು ಆಗ್ರಹಿಸಲಾಗುವುದು.

ಆಗಹಗಳು

  1. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತೆ ಘನ ತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಸ ಸಾಗಿಸುವ ವಾಹನ
    ಚಾಲಕರು ಲೋಡರ್ಸ್ ಕ್ಲೀನರ್ಸ್ ಹೆಲ್ಸರ್ಸ್ ಯೂಜಿಡಿ ಕಾರ್ಮಿಕರು ಸ್ಯಾನಿಟರಿ ಸೂಪರ್ ವೈಸರುಗಳನ್ನು
    ಏಕಕಾಲಕ್ಕೆ ಗುತ್ತಿಗೆ ಪದ್ಧತಿ ಬದಲು ನೇರಪಾವತಿಗೆ ತರಬೇಕು. 1964ರ ಪೌರಾಡಳಿತ ಕಾಯ್ದೆ ಪ್ರಕಾರ ಇವರನ್ನು
    ಪೌರಕಾರ್ಮಿಕರೆಂದು ಒಪ್ಪಿರುವುದರಿಂದ ಹಾಲೀ ನೇಮಕಾತಿಯಲ್ಲಿ ಇವರಿಗೂ ಅವಕಾಶ ಕಲಿಸಬೇಕು.

2 ನೀರು ಸರಬರಾಜು ಸಹಾಯಕರು ಬೀದಿದೀಪ ನಿರ್ವಾಹಕರು ಸ್ಮಶಾನ ಕಾವಲುಗಾರರನ್ನು ಏಕಕಾಲಕ್ಕೆ ನೇರಪಾವತಿಗೆ
ತಂದು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಗರಸಭೆ ಹೊರಗುತ್ತಿಗೆ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಪೆನ್ನೇಶ್ ಮಂಜುನಾಥ್, ಮಹೇಶ್ , ಪ್ರಭು ದಿವಾಕರ್, ತಿಪ್ಪೇಸ್ವಾಮಿ, ಪಾಪಣ್ಣ, ಕಾಳಿದಾಸ, ಪಾಲಿಶ್, ತಿಪ್ಪೇಸ್ವಾಮಿ ಡಿ, ರಘು, ನಾಗರಾಜ್, ಸೋಮಶೇಖರ್, ಹನುಮಂತ, ಮಂಜು, ತಿಪ್ಪೇಶ್, ಪ್ರಸನ್ನ, ಬೆಳಗೆರೆ ಮಂಜು, ನಾಗರಾಜ್ ಇತರರು ಪಾಲ್ಗೊಂಡಿದ್ದರು

About The Author

Namma Challakere Local News
error: Content is protected !!