ಚಳ್ಳಕೆರೆ : ದಲಿತರ ಕುಂದು ಕೊರೆತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಆಯೋಜಿಸಿದ್ದ ಸಭೆಯು ಕಳೆದ ಒಂದು ವರ್ಷದಿಂದ ದಲಿತರ ಕುಂದು ಕೊರತೆ ಸಭೆ ನಡೆದಿಲ್ಲ ಅದರ ಸಭಾ ನಡವಳಿಕೆಯ ಬಗ್ಗೆ ಮೊದಲು ಮಾಹಿತಿ ನೀಡಿ ತದನಂತರ ಸಭೆ ಮುಂದುವರೆಸಿ ಎಂದು ಸಭೆಗೆ ಆಗಮಿಸಿದ ದಲಿತ ಮುಖಂಡರ ಒತ್ತಾಯಕ್ಕೆ ಮಣಿದ ಡಿವೈಎಸ್‌ಪಿ ಟಿ.ಬಿ.ರಾಜಣ್ಣ ಮುಂದಿನ ತಿಂಗಳು ಡಿ.12ರಂದು ದಲಿತರ ಕುಂದು ಕೊರತೆ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಅವರು ನಗರದ ಡಿವೈಎಸ್‌ಪಿ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು, ಕಳೆದ ಬಾರಿ ಸಭೆಯ ಮಾಹಿತಿ ನೀಡುತ್ತೆವೆ ಈ ಸಭೆಯ ಬಗ್ಗೆ ಸಮಸ್ಯೆ ಇದ್ದರೆ ತಿಳಿಸಿ ಎಂದು ಕೇಳಿದಾಗ ಸಭೆಯಲ್ಲಿ ಒಕ್ಕೂರಲಿನಿಂದ ಮೊದಲು ಕಳೆದ ಸಭೆಯ ನಡವಳಿ ಬಗ್ಗೆ ತಿಳಿಸಿ ನಂತರ ಮುಂದಿನ ಸಮಸ್ಯೆಗಳ ಬಗ್ಗೆ ಕೇಳಿ ಎಂದರು.
ಇನ್ನೂ ತಾಲೂಕಿನ ದಲಿತರ ಕುಂದು ಕೊರತೆಗಳ ಮಹತ್ವದ ಸಭೆ ಕಳೆದ ಒಂದು ವರ್ಷದಿಂದ ನಡೆದಿಲ್ಲ ಇಲ್ಲಿನ ಸಮಸ್ಯೆಗಳು ಹೆಚ್ಚುತಿವೆ ಇನ್ನೂ ಸಭೆಗೆ ತಹಶೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿಗಳು, ಹಾಗೂ ಸ್ಥಳೀಯ ಶಾಸಕರನ್ನು ಕರೆಸಿ ಇಂತಹ ಮಹತ್ವದ ಸಭೆಯಲ್ಲಿ ತಾಲೂಕಿನ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ರೂಪಿಸುವ ಮೂಲಕ ಸಮಸ್ಯೆ ತಿಳಿಗೊಳಿಸಿ ಎಂದರು


ಇನ್ನೂ ಸಭೆಯಲ್ಲಿ ಕೇವಲ ಪರುಶುರಾಂಪುರ ಬಸ್ ನಿಲಾಣಕ್ಕೆ ದಲಿತರ ಅವಕಾಶ ಇಲ್ಲ ಎಂಬ ಸಮಸ್ಯೆ ಹಾಗೂ ಚಿತ್ರದುರ್ಗ ರಸ್ತೆಯಲ್ಲಿ ಅಂಗಡಿಯೊAದರ ಬಗ್ಗೆ ಮಾತ್ರ ಸಮಸ್ಯೆ ಮುನ್ನಲೆಗೆ ಬಂದಿತ್ತು.
ಬಾಕ್ಸ್ :
ದಲಿತರ ಸಮಸ್ಯೆಗಳ ಬಗ್ಗೆ ತಿಳಿಯಲು ಸ್ಥಳೀಯ ಶಾಸಕರನ್ನು ಆಹ್ವಾನಿಸಿ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ರೂಪಿಸುವ ಶಾಸಕರು ಇಂತಹ ಮಹತ್ವದ ದಲಿತರ ಸಭೆಗೆ ಬಾರದೆ ಇರಲು ಸಾಧ್ಯವಿಲ್ಲ ನಿಮ್ಮ ಅಧಿಕೃತ ಆಹ್ವಾನ ನೀಡಿ ಶಾಸಕರು ಬಾಗವಹಿಸಿಲು ತಿಳಿಸಿ ಇನ್ನೂ ಕೇವಲ ಪೊಲಿಸ್ ಇಲಾಖೆಗೆ ಮಾತ್ರವಲ್ಲದೆ ದಲಿತ ದೌರ್ಜನ್ಯ ಪ್ರಕರಣಗಳು ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ಈ ಸಭೆಯಲ್ಲಿ ಇರುವಂತೆ ಸಭೆ ಆಯೋಜಿಸಿ, ಎಂದು ದಲಿತ ಮುಖಂಡ ಟಿ.ವಿಜಯ್ ಕುಮಾರ್, ಮುಖಂಡರು ಒತ್ತಾಯಿಸಿದರು.

ಹೊಸ ನಡವಳಿ ಪುಸ್ತಕ :
ಪ್ರತಿ ಬಾರಿ ಸಭೆ ನಡೆಸುವಾಗ ಹೊಸ ನಡವಳಿ ಪುಸ್ತಕದಲ್ಲಿ ಸಭೆಗೆ ಹಾಜರಾದ ಮುಖಂಡರ ಸಹಿ ಪಡೆಯುವುದು ಮಾಮೂಲು ಹಾಗಿದೆ ಆದರೆ ಹಳೆ ನಡವಳಿ ಬಗ್ಗೆ ಮಾಹಿತಿ ನೀಡಿ, ಇನ್ನೂ ಕಳೆದ ಸಭೆಯಲ್ಲಿ ಯಾವ ತಿರ್ಮಾನ ಕೈಗೊಳ್ಳಲಾಗಿತ್ತು, ಸಮಸ್ಯೆಗಳು ಎಷ್ಟಿದ್ದವು ಎಂಬುದು ಈ ಸಭೆಯಲ್ಲಿ ತಿಳಿಸಬೇಕು ಆಗದಾಗ ಮಾತ್ರ ಈ ಸಭೆಗೆ ಮಹತ್ವ ಸಿಗಲಿದೆ, ಇನ್ನೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೀಡಲು ಬಂದ ಸಾರ್ವಜನಿಕರ ಜೊತೆ ನಡೆದುಕೊಳ್ಳುವ ರೀತಿಗೆ, ಸಿಬ್ಬಂದಿ ವರ್ತನೆ ಬಗ್ಗೆ ಸರಿಪಡಿಸಿ ಪೊಲೀಸ್ ಇಲಾಖೆಗೆ ಬೇರೆ ಭಾಷೆಯಾನದರೂ ಇದೆಯೇ.? ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು,
ಇದೇ ಸಂಧರ್ಭದಲ್ಲಿ ಸಿಪಿಐ ಕೆ.ಸಮೀವುಲ್ಲಾ, ಆರ್‌ಎಪ್ ದೇಸಾಯಿ, ಪಿಎಸ್‌ಐ ಜೆ.ಶಿವರಾಜ್, ದರೇಪ್ಪಾ ಬಾಳಪ್ಪ ದೊಡ್ಡಮನಿ, ದಲಿತ ಮುಖಂಡರಾದ ಡಿ.ಚಂದ್ರು, ಶಿವಮೂರ್ತಿ, ಸಿಟಿ.ಶ್ರೀನಿವಾಸ್, ಡಾ.ಮಂಜುನಾಥ್, ಸೂರನಾಯಕ, ಟಿ.ವಿಜಯ್‌ಕುಮಾರ್, ಪ್ರಕಾಶ್, ನನ್ನಿವಾಳ ನಾಗರಾಜ್, ವೀರಭದ್ರಿ, ಸೂರೇಶ್, ದ್ಯಾವರನಹಳ್ಳಿತಿಪ್ಪೆಸ್ವಾಮಿ, ಕಾಂತರಾಜ್, ಇತರ ಮುಖಂಡರು ಪಾಲ್ಗೊಂಡಿದ್ದರು.

Namma Challakere Local News
error: Content is protected !!