ಶಿಕ್ಷಣ ಇಲಾಖೆಯಲ್ಲಿ ಕೇವಲ ಬಿಲ್‌ಗಾಗಿ ಕಾಮಗಾರಿ ಮಾಡಿದ್ದಾರೆ : ಶಾಸಕ ಟಿ.ರಘುಮೂರ್ತಿ ಗರಂ
ಸಾಮಾನ್ಯ ಸಭೆಯಲ್ಲಿ ಗೈರಾದ ಅಧಿಕಾರಿಗಳಿಗೆ ನೋಟಿಸ್
ಚಳ್ಳಕೆರೆ : ತಾಲೂಕಿನಲ್ಲಿ ಬರಗಾಲವಿದೆ ಗೋವುಗಳಿಗೆ ಮೇವು ಹೊದಗಿಸಬೇಕು ಆದರೆ ಪಶುಇಲಾಖೆ ನಿಮ್ಮ ವರದಿ ನೋಡಿದರೆ ಮುಖ್ಯ ಮಂತ್ರಿಗಳು ಸಹಿ ಮಾಡಿದರು ಕೂಡ ಕಾರ್ಯದರ್ಶಿದಳು ತಾಲೂಕಿನಲ್ಲಿ ಗೋಶಾಲೆ ತೆರೆಯುವಂತೆ ಇಲ್ಲ ಎಂಬ ವರದಿ ನೀಡುತ್ತಾರೆ ಆದ್ದರಿಂದ ಸ್ಥಳೀಯವಾಗಿ ಪರೀಶಿಲನೆ ಮಾಡಿ ಮೇವು ಎಷ್ಟಿದೆ ಎಂಬುದು ವರದಿ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಚಳ್ಳಕೆರೆ ತಾಲೂಕು ಎರಡು ವಿಧಾನ ಸಭಾ ಕ್ಷೇತ್ರವನ್ನು ಹಂಚಿಕೊAಡಿದೆ ಇದರಿಂದ ಇಲ್ಲಿ ಇಬ್ಬರು ಶಾಸಕರು ಬರುತ್ತಾರೆ ಆದ್ದರಿಂದ ಈ ಬಾಗದಲ್ಲಿ ಕುಡಿಯುವ ನೀರಿಗೆ ಹಾಗೂ ದನಕರಗಳ ಮೇವಿಗೆ ತೊಂದರೆಯಾಗದAತೆ ನೊಡಿಕೊಳ್ಳಿ, ನಾಯಕನಹಟ್ಟಿ ಹೋಬಳಿಯಲ್ಲಿ ಒಂದು ಗೋಶಾಲೆ, ತಳಕು ಹೋಬಳಿಯಲ್ಲಿ ಒಂದು ಗೋಶಾಲೆ, ಪರುಶುರಾಂಪುರದಲ್ಲಿ, ಹಾಗೂ ಕಸಬಾದಲ್ಲಿ ಗೋಶಾಲೆ ತೆರೆಯುಂತೆ ಸೂಚಿಸಿದರು.
ಇನ್ನೂ ದೇವರ ಎತ್ತುಗಳಿಗೆ ಹಾಗೂ ರೈತರ ಎತ್ತುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ನೀಡುವ ಕಾರ್ಯವಾಗಬೇಕು, ಸರಕಾರಿ ಗೋಶಾಲೆಯಲ್ಲಿ ರೈತರ ಗೋವುಗಳಿಗೆ ತಂಗುವ ವ್ಯವಸ್ಥೆಗೆ ನಿಯಮಗಳನ್ನು ಸಡಿಲಿಕೆ ಮಾಡಬೇಕು ಇದರ ಬಗ್ಗೆ ನಿಮ್ಮ ಮೇಲಾಧಿಕಾರಿಗಳ ಬಳಿ ಚರ್ಚಿಸಿ ನಿಗವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಡಳಿತ ಅಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕ ಡಾ.ಮಂಜನಾಥ್ ಮಾತನಾಡಿ, ಮೊಳಕಾಲ್ಮೂರು ಕ್ಷೇತ್ರವ್ಯಾಪ್ತಿಗೆ 20 ಹಾಗೂ ಚಳ್ಳಕೆರೆ ಕ್ಷೇತ್ರಕ್ಕೆ 20 ಗ್ರಾಮಪಂಚಾಯಿತಿಗಳು ಬರುವುದರಿಂದ ಸಮನಾಗಿ ಅನುಧಾನ ತಲಾ 1.23 ಕೋಟಿ ಅನುಧಾನ ಹಂಚಿಕೆಯಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು,
ಈ ಅನುದಾನವನ್ನು ಶಿಕ್ಷಣ ಇಲಾಖೆ ಶೇ 15,ಆರೋಗ್ಯ ಇಲಾಖೆ ಶೇ 15, ಪರಿಶಿಷ್ಟ ಜಾತಿ ಹಾಗೂ ಪಂಗಡ ಶೇ25. ವಿಕಲಚೇತನರಿಗೆ ಶೇ0.05,ಸಾಮಾಜಿಕ ಲೆಕ್ಕ ಪರಿಶೋನೆಗೆ ಹೀಗೆ ನರೇಗಾ ಹಾಗೂ ಅನಿರ್ಭಂದಿತ ಅನುದಾನ ಒಗ್ಗೂಡಿಸಿ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ.ಕಾರ್ಯನಿರ್ವಾಹಣಾಧಿಕಾರಿ ಇಓ.ಶಶಿಧರ್ ಮಾತನಾಡಿ ಗ್ರಾಮೀಣ ಭಾಗದಿಲ್ಲಿ ಸರಕಾರಿ ಶಾಲೆಗಳ ಕಟ್ಟಡ ನಿರ್ಮಾಣ, ಗ್ರಾಮೀಣ ಸಂತೆ, ಉದ್ಯಾನವನ, ಸಾಮಾಜಿಕ ಅರಣ್ಯ ಅಭಿವೃದ್ಧಿ ಮಾಡಲು ಅನುದಾನ ಬಳಕೆ, ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಉಗ್ರಾಣ, ಅಂಗನವಾಡಿ, ಮಾಡಿಕೊಳ್ಳಲು ಅವಕಾಶ ಇದೆ ಎಂದು ಸಭಗೆ ಮಾಹಿತಿ ನೀಡಿದರು.
ಬಾಕ್ಸ್ ಮಾಡಿ :
ಮಳೆ ಬಂದು ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಅದಗೆಟ್ಟಿದ್ದು ಕೆಲವು 50 ವರ್ಷಗಳಿಂದ ನಿರ್ಮಿಸಿದ ರಸ್ತೆಗಳು ಗುಂಡಿ ಬಿದ್ದಿದ್ದು ಅವುಗಳು ದುರಸ್ಥಿ ಕಂಡಿಲ್ಲ, ಇನ್ನೂ ರಸ್ತೆಯ ಇಕ್ಕೆಲಗಳ ಅಕ್ಕ ಪಕ್ಕದ ಜಾಲಿ ಬೆಳೆದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಘನತ್ಯಾಜ್ಯ ವಿಲೆವಾರಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಿ, ಕಡಿಮೆ ಮೊತ್ತದಲ್ಲಿ ಕಟ್ಟಡಗಳ ನಿರ್ಮಾಣ ಮಾಡಲು ಸಾಧ್ಯವಿಲ್ಲ ಇರುವ ವ್ಯವಸ್ಥೆಯಲ್ಲಿ ಸೋರುತ್ತಿರುವ ಶಿಥಿಲವಾದ ಕಟ್ಟಡಗಳನ್ನು ದುರಸ್ಥಿ ಪಡಿಸಲು ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ಮಂಜನಾಥ್ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲು ಅವಕಾಶ ಇದೆ ಶಾಸಕರ ಗಮನಕ್ಕೆ ತಂದಾಗ ಶಾಸಕ ಟಿ.ರಘಮೂರ್ತಿ ತಾಲೂಕಿನಲ್ಲಿ ಈಗಾಗಲೆ 1.40 ಕೋಟಿ ವೆಚ್ಚದಲ್ಲಿ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಮಾಡಲಾಗಿದ್ದು ಎಲ್ಲಿ ಮಾಡಿದ್ದಾರೆ, ಎಂಬುದು ಮಾಹಿತಿ ಇಲ್ಲ, ಇದನ್ನು ಜಂಟಿ ನಿದೇರ್ಶಕರಿಗೆ ಪತ್ರ ರವಾನೆ ಮಾಡಿ, ಇನ್ನೂ ಸ್ಮಾಟ್ ಕ್ಲಾಸ್ ಯಾವ ಶಾಲೆಗಳಿಗೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ ಮೊದಲು ತನಿಖೆ ನಂತರ ಸ್ಮಾರ್ಟ್ ಕ್ಲಾಸ್, ಈಗ ಮೊದಲು ಇರುವ ವ್ಯವಸ್ಥೆಯಲ್ಲಿ ಶಿಕ್ಷಣ ನೀಡಬೇಕು ತದನಂತರ ಸ್ಮಾಟ್ ಕ್ಲಾಸ್ ಬಗ್ಗೆ ಯೋಚಿಸಬೇಕು, ಶಿಕ್ಷಣ ಇಲಾಖೆಯಲ್ಲಿ ಕೇವಲ ಬಿಲ್‌ಗಾಗಿ ಕಾಮಗಾರಿಯಾಗಿದೆ ಎಂದು ಶಾಸಕರು ಗರಂ ಆದರು.
ಕಳೆದ ಸಾಲಿನಲ್ಲಿ ಬೆಳೆ ವಿಮೆ ರೈತರ ಹೆಸರಿನಲ್ಲಿ ವಂಚನೆ ಮಾಡಿದ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಸೂಕ್ತಕ್ರಮ ಕೈಕೊಳ್ಳಬೇಕು ತಾಲೂಕು ಪಂಚಾಯಿತಿಗೆ ಸದಸ್ಯರಿಲ್ಲದ ಕಾರಣ ನಿವೇ ಅಧ್ಯಕ್ಷರಾಗಿದ್ದೀರಿ ಎಂದು ಶಾಸಕ ಟಿ.ರಘುಮೂರ್ತಿ ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಸಭೆಗೆ ಮಾಹಿತಿ ನೀಡುವಾಗ ಸೂಚಿಸಿದರು.
ಕಳೆದ ಹಲವು ದಿನಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನ ಸಂಪರ್ಕ ಸಭೆಗಳನ್ನು ಮಾಡಲಾಗುತ್ತಿದೆ ಆದರೆ ಒಂದು ದಿನವೂ ಅವರು ಸಭೆಗೆ ಬಂದಿಲ್ಲ ಇನ್ನೂ ಈ ಸಭೆಗೆ ಬಂದಿಲ್ಲ ಮುಲಾಜಿಲ್ಲದೆ, ಸಭೆಗೆ ಗೈರು ಹಾಜರು ಇರುವ ಜಿಪಂ ಇಎಎ ಕಾವ್ಯ ಗೆ ನೋಟಿಸ್ ಜಾರಿ ಮಾಡಿ ಎಂದು ಶಾಸಕರು ಡಾ.ಮಂಜುನಾಥ್ ರವರಿಗೆ ಸೂಚಿಸಿದರು.
ತಾಪಂ.ಇಒ ಶಶಿಧರ್ ಮಾತನಾಡಿ ಮೇವಿನ ಕೊರತೆಯನ್ನು ನೀಗಿಸಲು ನರೇಗಾ ಯೋಜನೆಯಡಿ ಪ್ರತಿ ಗ್ರಾಮದಲ್ಲೂ 10 ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಯಲು ಹಾಗೂ ಮನೆಗಳ ಮುಂದೆ ಖಾಲಿ ಜಾಗದಲ್ಲಿ ನಲ್ಲಿಯ ನೀರು, ವ್ಯರ್ಥವಾದ ನೀರು ಕೆರೆ, ನದಿ ದಡದಲ್ಲಿ ಮೇವು ಬೆಳೆಯಲು ಅವಕಾಶವಿದ್ದು ಹೆಚ್ಚಿನ ಪ್ರಚಾರ ಮಾಡಿ ಮೇವು ಬೆಳೆಯಲು ಉತ್ತೇಜನ ನೀಡುವಂತೆ ತಿಳಿಸಿದರು.
ಈ ಸಭೆಯಲ್ಲಿ ಅರಣ್ಯಧಿಕಾರಿ ಬಹುಗುಣ, ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ, ಸಮಾಜಕಲ್ಯಾಣಾಧಿಕಾರಿ ಮಂಜಪ್ಪ, ಎಸ್ಟಿ ಇಲಾಖೆ ಶಿವರಾಜ್, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.