ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಮಕ್ಕಳಲ್ಲಿ ಅಗಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಎನ್ನುವುದು, ಇಂತಹ ವೇದಿಕೆಯ ಮೂಲಕ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ ವೇದಿಕೆ ಇದಾಗಿದೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾಕಾರಂಜಿ ಕರ‍್ಯಕ್ರಮದ ಉದ್ಘಾಟನೆಯನ್ನು ನೆರೆವೆರಿಸಿ ಮಾತನಾಡಿದ ಅವರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಪ್ರತಿಭಾಕಾರಂಜಿ ಪ್ರಮುಖ ಘಟ್ಟವಾಗಿದೆ, ವಿದ್ಯರ‍್ಥಿಗಳಲ್ಲಿರುವ ಸಾರ‍್ಥ್ಯವನ್ನು ಹೊರತೆಗೆಯಲು ಇಂತಹ ಸುಸಜ್ಜಿತ ವೇದಿಕೆ ಪ್ರಮುಖವಾಗಿದೆ, ಇಂತಹ ಪ್ರತಿಭೆಗಳು ಅರಳಬೇಕು, ಇಂತಹ ಕರ‍್ಯಕ್ರಮಗಳು ನಡೆದಾಗ ಮಾತ್ರ ಮ್ಕಕಳ ಭವಿಷ್ಯ ರೂಪಿಸಲು ಸಾಧ್ಯ. ವಿದ್ಯರ‍್ಥಿ ಜೀವನದ ಕನಸ ಮಾಡಲು ಈ ಹಂತದ ಚಟುವಟಿಕೆಗಳು ಪ್ರೇರಕ ಶಕ್ತಿಯಗುತ್ತಾವೆ ಆದ್ದರಿಂದ ಶಿಕ್ಷಕರು ಮರ‍್ಗರ‍್ಶಕರಾಗಿ ಮಕ್ಕಳ ಪ್ರತಿಭೆಯನ್ನು ಗುರುತಿಸವ ಕೆಲಸವಾಗಬೇಕು ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಮಾತನಾಡಿ, ಮಕ್ಕಳ ಮುಂದಿನ ಭಾವಿ ಭವಿಷ್ಯದಲ್ಲಿ ಸಾಧಿಸುವ ಕ್ರಿಯಾ ಆಲೋಚನೆಗೆ ಪ್ರತಿಭಾ ಕಾರಂಜಿ ಹಿಂಬು ನೀಡಿತ್ತದೆ ನಾಲ್ಕು ಗೋಡೆಗಳ ಮಧ್ಯೆ ಕಲಿತ ಪಾಠವನ್ನು ಮಕ್ಕಳು ಪ್ರತಿಭಾಕಾರಂಜಿಯಿಂದ ತಮ್ಮ ಸಾರ‍್ಥ್ಯ ಹೊರಹಾಕುವ ವೇದಿಕೆಯಾಗಿದೆ. ಮಕ್ಕಳ ಪ್ರತಿಭೆಗೆ ಅನುಗುಣವಾಗಿ ತರ‍್ಪುಗಾರರು ವಿವೇಚನೆಯಿಂದ ಪ್ರತಿಭೆಯನ್ನು ಗುರುತಿಸಿ ತರ‍್ಪು ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂರ‍್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇಂದ್ರ, ಸದಸ್ಯೆ ಕವಿತಾ, ಸುಜಾತಾ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಎಲ್.ಲಿಂಗೇಗೌಡ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೆಸ್ವಾಮಿ, ನೋಡಲ್ ಅಧಿಕಾರಿ ಮಾರುತಿ ಭಂಡಾರಿ, ಪ್ರಮೀಳಾ, ಶ್ರೀನಿವಾಸ್, ಇತರರು ಇದ್ದರು.

ಪೋಟೋ : ತಾಲೂಕಿನ ವಿವಿಧ ಶಾಲೆಯ ಮಕ್ಕಳು ಛದ್ಮವೇಶ ಧರಿಸುವ ಮೂಲಕ ಸಭಿಕರ ಗಮನ ಸೇಳೆದರು ಇನ್ನೂ ಕಾಂತರ ಸಿನಿಮಾದ ಪಂಜರ‍್ಲಿ ಗುಳಿಗ ದೈವದ ವೇಶ ಧರಿಸಿದ ಮನ್ವಂತರ ಶಾಲೆಯ ಮೂರನೇ ತರಗತಿ ವಿದ್ಯರ‍್ಥಿ ಸರ‍್ಯ ಪ್ರಸಾದ್ ಎಲ್ಲಾರ ಗಮನ ಸೆಳೆಯಲಾಯಿತ

Namma Challakere Local News
error: Content is protected !!