ಚಳ್ಳಕೆರೆ : ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ತಿಂಗಳು ಕಳೆದರೂ ಗೃಹಲಕ್ಷ್ಮಿ ಹಣ ಬಹುತೇಕ ಮಹಿಳೆಯರಿಗೆ ಇನ್ನೂ ತಲುಪದ ಕಾರಣ ಗೃಹಿಣಿಯರ ಪರದಾಟ ಸರಕಾರಿ ಕಛೇರಿಗಳಿಗೆ ಅಲೆದಾಟ ತಪ್ಪಿಲ್ಲ.
ಹೌದು ಚಳ್ಳಕೆರೆ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗ್ರಾಮೀಣ ಭಾಗದ ಗೃಹಿಣಿಯರು ಖಾತೆಗೆ ಇನ್ನೂ ಹಣ ಬಂದಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ, ನಿಮ್ಮ ಎಡವಟ್ಟಿನಿಂದ ನಮಗೆ ಸರಕಾರದ ಯೋಜನೆಗಳನ್ನು ಪಡೆಯಲು ಹಾಗುತ್ತಿಲ್ಲ ಕಳೆದ ಎರಡರಿಂದ ಮೂರು ತಿಂಗಳ ಹಣ ಇನ್ನೂ ಬಂದಿಲ್ಲ, ಮೂರನೇ ಕಂತು ಹಣ ಬಂದಿಲ್ಲ ನೋಡಿ ಎಂದು ಗೃಹಿಣಿಯರು ಅಧಿಕಾರಿಗಳಿಗೆ ಆಧಾರ್ ಕಾರ್ಡ ನೀಡುವ ಮೂಲಕ ದಂಡು ದೌಡಾಯಿಸಿತ್ತು.
ಗೃಹಲಕ್ಷ್ಮಿ ಯೋಜನೆಯ 2 ಸಾವಿರೂ ಪಡೆಯಲು ಅರ್ಜಿ ಸಲ್ಲಿಸಲ್ಲಿಸಿದ್ದರೂ ಸಹ ಖಾತೆ ಹಣ ಬಾರದ ಆಹಾರ ಇಲಾಖೆಗೆ, ಬ್ಯಾಂಕ್ ಹಾಗೂ ಅಂಚೆ ಕಚೇರಿ ಗ್ರಾಮ ಒನ್ ಕೇಂದ್ರಗಳಿಗೆ ಅಲೆದಾಡಿ ಕೊನೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮುಂದೆ ಅರ್ಜಿ ಪರಿಶೀಲನೆ ಮಾಡಿಸಲು ಮುಗಿ ಬಿದ್ದಿದ್ದಾರೆ.
ಬಾಕ್ಸ್ ಮಾಡಿ :
ಮನೆಯ ಯಜಮಾನಿಯರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ, ಅದು ಸ್ವೀಕೃತಗೊಂಡಿದ್ದರೂ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಕಾರಣದಿಂದ ಕೆಲವರಿಗೆ ಹಣ ಖಾತೆಗೆ ಬರುತ್ತಿಲ್ಲ. ಇನ್ನು ಕೆಲವರು ಖಾತೆ ಮಾಡಿಸಿ ಆಧಾರ್ ಲಿಂಕ್ ಆಗಿರುತ್ತದೆ ಬಹಳ ದಿನಗಳಿಂದ ಬ್ಯಾಂಕ್ ಖಾತೆ ಚಾಲ್ತಿಯಿಲ್ಲದೆ ಕಾರಣ ಆ ಖಾತೆಗೆ ಹಣ ಬಿದ್ದರೂ ಗೊತ್ತಾಗುವುದಿಲ್ಲ ಇಂಥ ಸಮಸ್ಯೆಗಳನ್ನು ಸಾಕಷ್ಟು ಮಂದಿ ಎದುರಿಸುತ್ತಿದ್ದು, ನಿತ್ಯ ಸಂಬAಧಿಸಿದ ಸರಕಾರಿ ಕಚೇರಿ ಅಲೆದಾಡುವಂತಾಗಿದೆ ಎಂದು ಗೃಹಲಕ್ಷ್ಮಿಯರ ಮಾತಾಗಿದೆ.