ಚಳ್ಳಕೆರೆ : ಸರಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ ರೈತರ ಜಮೀನುಗಳಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ, ನಕಾಷೆ ಕಂಡ ದಾರಿಗಳನ್ನು ಮುಲಾಜಿಲ್ಲದೆ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬಿಡಿಸಿಕೊಡ ಬೇಕು ಅಡ್ಡಿ ಪಡಿಸಿದವರು ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶಾಸಕ ಟಿ.ರಘುಮೂರ್ತಿ ಖಡಕ್ಕಾಗಿ ಸೂಚಿಸಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಿಂದ ಬಂದAತಹ ರೈತರಿಗೆ ಅಲೆದಾಡಿಸದೆ ಸ್ಥಳದಲ್ಲಿ ಪರಿಹಾರ ನೀಡುವಂತಹ ಕಾರ್ಯವಾಗಬೇಕು, ಸರಕಾರಿ ಕಚೇರಿಗಳಿಗೆ ಅಲೆದಾಡಿಸದೆ ಸಾರ್ವಜನಿಕರಿಗೆ ಸೌಜನ್ಯದಿಂದ ಮಾತನಾಡಿಸುವ ಮೂಲಕ ನಿಗಧಿತ ಅವಧಿಯೊಳಗೆ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇನ್ನೂ ಮೊದಲಿಗೆ ಬೇಡರೆಡ್ಡಿಗಳ್ಳಿ ರೈತರಿಂದ ಗೂಳಿ ನಿಯಂತ್ರಿಸಿ ಎಂಬ ಮನವಿ ಸ್ವೀಕರಿಸಿದ ಶಾಸಕರು ಗೂಲಿ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ಬೆಳೆಗಳನ್ನು ಉಳಿಸಿ ಎಂದರು, ಇನ್ನೂ ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ ಹಾಲಗೊಂಡನಹಳ್ಳಿ ಗ್ರಾಮದ ಖಾಸಗಿ ಜಮೀನೊಂದರಲ್ಲಿ ಕುಟುಂಬವೊAದು ವಾಸ ಮಾಡುತ್ತಿದೆ ತಾಲೂಕು ಆಡಳಿತ ಖಾಲಿ ಮಾಡಿಸಲು ಮುಂದಾಗದೆ ಕೈ ಕಟ್ಟಿ ಕುಳಿತಿದೆ, ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಇಲ್ಲಿ ರಿಯಲ್ ಎಸ್ಟೇಟ್ ಬಿಸಿನೆಸ್ ಆಗಿದೆ ಎಂದು ತಹಶೀಲ್ದಾರ್ ವಿರುದ್ದ ದೂರಿನ ಸುರಿಮಳೆ ಗೈದರು.
ಶಾಸಕ ಟಿ. ರಘುಮೂರ್ತಿ ಮಾತನಾಡಿ ಹಾಲನಗೊಂಡನಹಳ್ಳಿ ಗ್ರಾಮದ ದಲಿತ ಕುಟುಂಬಗಳು ನದಿ ಪಾತ್ರದಲ್ಲಿ ವಾಸು ಮಾಡುತ್ತಿದ್ದರಿಂದ ನದಿಯನೀರು ನುಗ್ಗಿ ಒಬ್ಬ ಅಜ್ಜಿ ಮೃತ ಪಟ್ಟಿರುವುದರಿಂದ ಅವರಿಗೆ ನದಿ ಪಾತ್ರದಿಂದ ಖಾಲಿ ಮಾಡಿ ನಿವೇಶನ ನೀಡಲು ನಾನೇ ಜಿಲ್ಲಾಧಿಕಾರಿಗಳ ಹಾಗೂ ವಿಧಾನ ಸೌಧದಲ್ಲಿ ಹಾಲಿಗೊಂಡನಹಳ್ಳಿ ದಲಿತ ಕುಟುಂಬಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ ಎಂದು ಕೆ.ಪಿ.ಭೂತಯ್ಯಗೆ ಉತ್ತರ ನೀಡಿದರು.
ನಗರದಭೆ ವ್ಯಾಪ್ತಿಯ ಮೈರಾಡಾ ಕಾಲೋನಿಯಲ್ಲಿ ಕುಡಿಯುವ ನೀರು ಮೂರು ದಿನಕ್ಕೊಮ್ಮೆ ಬಿಡುತ್ತಾರೆ, ವಿದ್ಯುತ್ ಸಮಸ್ಯೆ ಇದೆ ಎಂದು ಹಲವು ಮಹಿಳೆಯರು ಶಾಸಕರಿಗೆ ಮನವಿ ಸಲ್ಲಿಸಿದರು ಶಾಸಕರು ಪೌರಾಯುಕ್ತ ಚಂದ್ರಪ್ಪಗೆ ಸೂಚಿಸಿದರು.
ಇನ್ನೂ ಗ್ರಾಮೀಣ ಭಾಗದ ಚಿಕ್ಕೇನಹಳ್ಳಿ, ಪರಶುರಾಂಪುರ, ಜಡೆಕುಂಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರ ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದೇವೆ ನಮ್ಮ ಹೊಲಕ್ಕೆ ದಾರಿ ಬಿಡಿಸಿಕೊಡುವಂತೆ ರೈತರು ಮನವಿ ಮಾಡಿಕೊಂಡರು. ಮಿರಸಾಬಿಹಳ್ಳಿ ಗ್ರಾಮದ ಮಹಿಳೆಯರು ನಮಗೆ ನಿವೇಶನವಿಲ್ಲ ನಿವೇಧನ ನೀಡುವಂತೆ ಶಾಸಕರಿಗೆ ಮನವಿ ಮಾಡಿದರು.
ಸ್ಮಶಾನ ಭೂಮಿ ಬಿಟ್ಟು ಹಳ್ಳ, ಕಾಲುವೆ ರಸ್ತೆಯನ್ನು ಮುಚ್ಚಿ ಮೂರು ಎಕರೆ ನಿವೇಶನಕ್ಕೆ ಭೂಮಿ ಮಾಡಿ ಇಲ್ಲವೆ ಸರಕಾರ ನಿಗಧಿ ಪಡಿಸಿದ ಮೌಲ್ಯಕ್ಕೆ ಖಾಸಗಿಯವರಿಂದ ಭೂಮಿ ಖರೀದಿ ಮಾಡಲು ಅವಕಾಶವಿದೆ ಇದು ಯಾವುದೇ ಒಂದು ಗ್ರಾಪಂ ಸೀಮಿತವಲ್ಲ ಎಲ್ಲಾ ಗ್ರಾಪಂ ಪಿಡಿಒಗಳು ಸ್ಮಶಾನ ಹಾಗೂ ನಿವೇಶನಗಳಿಗೆ ಸರಕಾರಿ ಭೂಮಿ ಯಿಲ್ಲದವರು ಖಾಸಗಿ ಜಮೀನು ಖರೀದಿಸಲು ಅವಕಾಶವಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ನಕಾಷೆ ಕಂಡ ದಾರಿ ಇದ್ದರೆ ಬಿಡಿಸಿಕೊಡಲಾಗುವುದು ಪರಶುರಾಂಪುರ ಹಾಗೂ ಕಸಬ ಹೋಬಳಿ ವ್ಯಾಪ್ತಿಯಲ್ಲಿ ಇಂತಹ 11 ಪ್ರಕರಣಗಳಿವೆ ಸ್ಥಳಕ್ಕೆ ಭೇಟಿ ನೀಡಿ ದಾರಿ ಬಿಡಿಸಿ ಬಂದರೂ ಮತ್ತೆ ಬಂದ್ ಮಾಡುತ್ತಾರೆ ಎಂದು ಸಭೆಯ ಗಮನಸೆಳೆದರು.
ತಾಲೂಕಿನ ವಿವಿಧ ಗ್ರಾಮಹಳಲ್ಲಿರೈತರ ಜಮೀನುಗಳಿಗೆ ಹೋಗುವ ದಾರಿ ಇಲ್ಲ ಎಂದು ಅನೇಕ ರೈತರು ರಸ್ತೆ ಬಿಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ಸರಕಾರದ ಐದು ಗ್ಯಾರಂಟಗಳಲ್ಲಿ ಅನ್ನ ಭಾಗ್ಯ, ಗೃಹಲಕ್ಷಿö್ಮÃ ಯೋಜನೆಯಡಿಯಲ್ಲಿ ಯಾರೂ ಸೌಲಭ್ಯಗಳಿಂದ ವಂಚಿತರಾಗದAತೆ ಅಧಿಕಾರಿಗಳು ನೋಡಿಕೊಳ್ಳಬೇಕು, ಕುಡಿಯುವ ನೀರು, ಬೀದಿ ದೀಪ, ಸ್ವಚ್ಚತೆ, ಇ-ಸ್ವತ್ತು, ನಿವೇಶನ, ಅಕ್ರಮ ಸಕ್ರಮ, ಪೋಡಿ ದುರಸ್ಥಿ, ಸರ್ವೆ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಜನರನ್ನು ಅಲೆದಾಡಿಸದೆ ಕೆಲಸ ಮಾಡ ಬೇಕು ಇನ್ನು ಒಂದು ತಿಂಗಳ ಅವಧಿಯಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಡಳಿತದೊಂದಿಗೆ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡುವಷ್ಟರಲ್ಲಿ ಈ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡಿರ ಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಭೆಯಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ತಾಪಂ ಇ ಒ ಶಶಿಧರ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಸಿಡಿಪಿಒ ಹರಿಪ್ರಸಾದ್, ಬಿಇಒ ಕೆ.ಎಸ್.ಸುರೇಶ್, ತಾಪಂ ಸಹಾಯಕ ನಿರ್ದೇಶಕ ಸಂತೋಷ್ , ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪ, ಕುಡಿಯುವ ನೀರು ನೈರ್ಮಲ್ಯ ಎಇಇ ದಯಾನಂದ್, ಪಿಆರ್‌ಡಿ ಎಇಇ ಕಾವ್ಯ,ವೃತ್ತ ನಿರೀಕ್ಷಕ ಕೆ.ಸಮೀವುಲ್ಲ, ಪಿಎಸ್‌ಐ ಸತೀಶ್ ನಾಯ್ಕ, ಸೇರಿದಂತೆ ಗ್ರಾಪಂ ಪಿಡಿಒಗಳು, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!