ಚಳ್ಳಕೆರೆ : ಶಿಕ್ಷಾ ದೀಪ ವಿದ್ಯಾರ್ಥಿ ವೇತನ ಪಡೆಯುವ ಮೂಲಕ ಉನ್ನತ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮುಂದೆ ಬನ್ನಿ ಎಂದು ಪಿ.ಶಿಂಗ್ವಿ ಚಾರಿಟೇಬಲ್ ಟ್ರಸ್ಟ್ ನ ಸಂಯೋಜಕ ಈರಪ್ಪ ಹೇಳಿದರು.
ಅವರು ನಗರದ ಎಪಿಎಂಸಿ ಮಾರುಕಟ್ಟೆಯ ಶ್ರಮಿಕರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿದ್ಯಾರ್ಥಿಗಳು ಹಾಗೂ ಪೋಷಕರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಬಡಕೂಲಿ ಕಾರ್ಮಿಕರ ಮಕ್ಕಳನ್ನು ವಿದ್ಯಾಬ್ಯಾಸ ಮಾಡಿಸಲು ಹಲವು ಕಷ್ಟಗಳನ್ನು ಪಡುತ್ತಾರೆ, ಕನಿಷ್ಟ ಕೂಲಿ ಮಾಡುವ ಬಡ ಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗದ ಆಸೆ ಕಮರಿ ಹೊಗಬಾರದು ಎಂದು ನಮ್ಮ ಪಿ.ಸಿಂಗ್ವಿ ಚಾರಿಟೇಬಲ್ ಟ್ರಸ್ಟ್ವತಿಯಿಂದ ಅಮಾಲಿ ಕಾರ್ಮಿಕರ ಮಕ್ಕಳಿಗೆ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ, ಪಿಯುಸಿಯಿಂದ ಮುಂದಿನ ಉನ್ನತ ವ್ಯಾಸಂಗದ ವರೆಗೆ ಅವರ ಅಂಕಗಳ ಮೂಲಕ ಅವರ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಅದ್ದರಿಂದ ಈ ಯೋಜನೆಯನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಬಲರಾಗಬಹುವುದು ಎಂದರು.
ಎಐಟಿಯುಸಿ ಕಾರ್ಯಕರ್ತ ತಿಪ್ಪೇಸ್ವಾಮಿ ಮಾತನಾಡಿ, ರಾಜಸ್ತನಾದ ಉದ್ಯಾಮಿ ತಮ್ಮ ಕಂಪನಿಯ ಸಿಎಸ್‌ಆರ್ ಪಂಡ್ ಮೂಲಕ ರಾಜ್ಯದ ಬಡ ಮಕ್ಕಳ ಕಲ್ಯಾಣಕ್ಕೆ 2012ರಿಂದ ಈ ಯೋಜನೆ ಜಾರಿಯಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಸುಮಾರು ಆರು ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಳು ಈ ಯೋಜನೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಈದೇ ಸಂಧರ್ಭದಲ್ಲಿ ಅಮಾಲಿ ಕಾರ್ಮಿಕ ಮಕ್ಕಳು ಹಾಗೂ ಪೋಷಕರು ಬಾಗವಹಿಸಿದ್ದರು.

About The Author

Namma Challakere Local News
error: Content is protected !!