ಚಳ್ಳಕೆರೆ : ತಾಲ್ಲೂಕು ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ, ಯಾದಲಗಟ್ಟೆ ಗೊಲ್ಲರಹಟ್ಟಿ, ಎಸ್.ಟಿ. ಕಾಲೋನಿ ಹಾಗೂ ಉಪ್ಪಾರ ಸಮೂದಾಯದ ಕಾಲೋನಿಗೆ ಸೇರಿದಂತೆ, ಸುಮಾರು 300 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿಗೆ ಇಲ್ಲಿನ ರೈತರ ತೋಟಗಳಿಂದ ನೀರನ್ನು ತರುತ್ತಿದ್ದು ಇದರಿಂದ ನಾವುಗಳು ತುಂಬಾ ಪರಿತಾಪಿಸುತ್ತಿದ್ದೇವೆ.
ಇದರ ಸಲುವಾಗಿ ಪಂಚಾಯಿತಿ ಪಿ.ಡಿ.ಓ. ರವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಮಾಧ್ಯಮಗಳಲ್ಲಿ ಕುಡಿಯುವ ನೀರಿನ ಬಗ್ಗೆ ಕೂಲಂಕುಷವಾಗಿ ವರದಿ ಪ್ರಸಾರ ಮಾಡಿದ್ದರೂ ಕುಡಿಯುವ ನೀರನ್ನು ಒದಗಿಸದೇ ಮಾದ್ಯಮದವರಿಗೆ ಕುಡಿಯುವ ನೀರಿನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಕಳೆದ ಮೂರು ವರ್ಷಗಳ ಕೆಳಗೆ ಕುಡಿಯುವ ನೀರಿಗಾಗಿ ಬಾಷಾರವರ ತೋಟದ ಪಕ್ಕದಲ್ಲಿ ಬೋರ್‌ವೆಲ್ ಕೊರೆಸಲಾಗಿದೆ. ಈ ಬೋರ್ ವೆಲ್ ನೀರನ್ನು ಬಾಷಾರವರೇ ಬಳಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಕುಡಿಯುವ ನೀರಿಗಾಗಿ ಸುಮಾರು 2.00 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಇಲ್ಲಿ ಯಾವುದೇ ಹಣವನ್ನು ವಿನಿಯೋಗ ಮಾಡಿರುವುದಿಲ್ಲ. ಇದರ ಸಂಪೂರ್ಣ ತನಿಖೆ ಮಾಡಿ ಪಿ.ಡಿ.ಓ. ರವರನ್ನು ಅಮಾನತ್ತಿನಲ್ಲಿಟ್ಟು ಪ್ರಸ್ತುತ ಬಾಷಾರವರ ತೋಟದ ಪಕ್ಕದಲ್ಲಿರುವ ನೀರೇ ಕುಡಿಯಲು ಯೋಗ್ಯವಾಗಿದ್ದು, ಇದೇ ತಿಂಗಳು ಐದನೇ ತಾರೀಖಿನ ಒಳಗಾಗಿ ಈ ಬೋರ್‌ವೆಲ್ ನಿಂದಲೇ ಕುಡಿಯುವ ನೀರನ್ನು ಒದಗಿಸುವ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಯಾದಲಗಟ್ಟೆಯಿಂದ ತಾಲ್ಲೂಕು ಕಛೇರಿವರೆಗೂ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಕೂಡಲೇ ಸ್ಥಳ ಪರಿಶೀಲಿಸಿ ಕುಡಿಯುವ ನೀರನ್ನು ಒದಗಿಸಬೇಕೆಂದು ತಮ್ಮಲ್ಲಿ ಮನವಿ.

Namma Challakere Local News
error: Content is protected !!