ಚಳ್ಳಕೆರೆ ನಗರಸಭೆ ಕೆಲವು ಅಧಿಕಾರಿಗಳು ವರ್ಗಾವಣೆ : ವರ್ಗಾವಣೆ ಖಂಡಿಸಿ ಬಂಗ್ಲೆ ಶ್ರೀನಿವಾಸ್ ಕಿಡಿ
ಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಇರುವ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಸರಕಾರ ಸನ್ನದ್ದು ಹಾಗಿದೆ.
ಅದರಂತೆ ಚಳ್ಳಕೆರೆ ನಗರಸಭೆಯಲ್ಲಿ ಸುಮಾರು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ತನ್ನ ಕಾರ್ಯಪ್ರವೃತ್ತಿ ಮೆರೆದ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ಇನ್ನೂ ವರ್ಗಾವಣೆ ಆದ ಅಧಿಕಾರಿ ಸಿಬ್ಬಂದಿಗಳು ಅತೀ ಹೆಚ್ಚಿನದಾಗಿ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಗಳನ್ನು ಟಾರ್ಗೇಟ್ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬಂಗ್ಲೆ ಶ್ರೀನಿವಾಸ್ ವರ್ಗಾವಣೆ ಆದೇಶದ ವಿರುದ್ದ ಆರೋಪ ಮಾಡಿದ್ದಾರೆ.
ಸರಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ನಮ್ಮಅಭ್ಯಂತರವಿಲ್ಲ ಆದರೆ ಅತೀ ಹೆಚ್ಚಿನದಾಗಿ ಕೇವಲ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ವರ್ಗಾವಣೆ ಮಾಡುವುದು ಸರಿಯಲ್ಲ ಇದರಿಂದ ನಮ್ಮ ಸಮುದಾಯದ ಅಧಿಕಾರಿಗಳನ್ನು ಅತ್ತಿಕ್ಕುವ ಕೆಲಸವಾಗುತ್ತಿದೆ ಇದನ್ನು ಪಾರದರ್ಶಕವಾಗಿ ಅಧಿಕಾರಿಗಳು ಪರೀಶಿಲಿಬೇಕಿದೆ..
ಇನ್ನೂ ತಾಲ್ಲೂಕಿನ ಮಾದಿಗದ ಜನಾಂಗವನ್ನು ಅತ್ತಿಕ್ಕುವ ಕಾರ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ನಗರಸಭೆಯಲ್ಲಿ ಇನ್ನೂ ಹತ್ತು ವರ್ಷಕ್ಕೂ ಹೆಚ್ಚಿನದಾಗಿ ಒಂದೇ ಸ್ಥಳದಲ್ಲಿ ಇರುವ ಅಧಿಕಾರಿಗಳು ಇದ್ದಾರೆ ಆದರೆ ಪಾರದರ್ಶಕವಾಗಿ ಪರಶಿಲನೆ ನಡೆಸಿ ವರ್ಗಾವಣೆ ಮಾಡಿ ಸುಗಮ ಆಡಳಿತಕ್ಕೆ ಅನುಕೂಲ ಮಾಡಲು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದಿದ್ದಾರೆ.