ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು, ಇಂದಿನ ಆಧುನಿಕಯುಗದಲ್ಲಿ ತಂದೆ ತಾಯಿಗಳು ಆಂಗ್ಲ ಭಾಷೆ ವ್ಯಾಮೋಹಕ್ಕೆ ಸಿಲುಕಿ ಕನ್ನಡವನ್ನು ಮರೆಯುತ್ತಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲೆಯ ಆವರಣದ ಬಯಲು ರಂಗಮAದಿರದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದಶಕಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಅನ್ಯಭಾಷೆಯನ್ನು ಕಲಿಯಬೇಕೆಂದು ಪರಕೀಯರು ತಮ್ಮ ವ್ಯಾಪಾರದ ಅಭಿವೃದ್ಧಿಗಾಗಿ ಅಖಂಡ ಭಾರತÀವನ್ನು ಹರಿದು ಹಂಚಿ ಹಲವಾರು ಪ್ರಾಂತ್ಯಗಳನ್ನಾಗಿ ಮಾಡಿಕೊಂಡು ತಮ್ಮ ದೇಶದ ಸಂಪತ್ತನ್ನು ಕೊಳ್ಳೆಹೊಡೆದರು ಇದನ್ನು ಮನಗಂಡ ನಮ್ಮ ಸಾಹಿತಿಗಳು, ಚಿಂತಕರು ಚಳುವಳಿ ಮೂಲಕ ಕನ್ನಡ ಭಾಷೆಯನ್ನಾಡುವ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಸಾಧ್ಯವಾಯಿತು, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಸಂಧಿರುವುದು ಸಂತಸ ತಂದಿದೆ ಅದೇ ರೀತಿಯಲ್ಲಿ ಬಯಲು ಸೀಮೆ ಚಳ್ಳಕೆರೆ ತಾಲೂಕಿಗೆ ಸುಮಾರು 5 ಜನರಿಗೆ ರಾಜ್ಯದ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅಭಿನಂಧರ್ಹ ಪ್ರಸ್ತುತ ರಂಗಭೂಮಿ ಕಲಾವಿಧ ಪಿ ತಿಪ್ಪೆಸ್ವಾಮಿಗೆ ಪ್ರಶಸ್ತಿ ಸಂಧಿರುವುದು ಸಂತೋಷ ತಂದಿದೆ ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಕನ್ನಡ ನೆಲ,ಜಲ, ಭಾಷೆಗೆ ಒತ್ತು ನೀಡ ಬೇಕು, ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮುಗ್ಗಟ್ಟುಗಳಲ್ಲಿ ಕಡ್ಡಾಯವಾಗಿ ಕನ್ನಡದ ನಾಮ ಫಲಕಗಳನ್ನು ಹಾಕಬೇಕು, ಪ್ರತಿಯೊಬ್ಬರ ಮನೆ ಮನಗಳಲ್ಲಿ ಕನ್ನಡ ರಾಜ್ಯೋತ್ಸವ ಹಬ್ಬದ ವಾತಾವರಣ ನಿರ್ಮಿಸುವಂತಾಗ ಬೇಕು ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಇನ್ನೂ ಕನ್ನಡದ ಸಂದೇಶವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ ಆಲೂರು ವೆಂಕಟರಾವ್, 1950ರಲ್ಲಿ ಭಾರತವು ಗಣರಾಜ್ಯವಾಯಿತು ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳನ್ನು ರಚಿಸಲಾಯಿತು ಮತ್ತು ಇದು ದಕ್ಷಿಣ ಭಾರತದ ವಿವಿಧ ಸ್ಥಳಗಳನ್ನು ಒಳಗೊಂಡAತೆ ಮೈಸೂರು ರಾಜ್ಯಕ್ಕೆ ಜನ್ಮ ನೀಡಿತು, ಇದನ್ನು ಮೊದಲು ರಾಜರು ಆಳಿದರು. 1 ನವೆಂಬರ್ 1956 ರಂದು, ಮೈಸೂರು ರಾಜ್ಯವು ,ಇಂದಿನ ಕರ್ನಾಟಕವಾಗಿ 50 ವರ್ಷಗಳು ಪೂರೈಸಿವೆ ಎಂದರು.
ಕಾರ್ಯಕ್ರಮದ ಮೊದಲು ತಾಲೂಕು ಕಚೇರಿ ಆವರಣದಲ್ಲಿ ದ್ವಜರೋಹಣ ನೆರವೇರಿಸಿ ಭುವನೇಶ್ವರಿತಾಯಿಯ ಮೆರೆವಣಿಗೆಯೊಂದಿಗೆ ಅಂಬೇಡ್ಕರ್ ವೃತ್ತ, ಮೂಲಕ ಕನ್ನಡ ದ್ವಜ ಹಾಗೂ ಜಾನಪದ ಮೇಳಗಳೊಂದಿಗೆ ಮೆರವಣಿಗೆ ನಡೆಸಿ ವೇದಿಕೆಯತ್ತ ಕರತರಲಾಯಿತು, ಅದರಂತೆ ನಾಡು ನುಡಿ ಹಾಗೂ ಸೇವೆಗೈದ 14 ಜನರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.
ಸನ್ಮಾನಿತರು :
ಹವ್ಯಾಸಿ ಕಲಾವಿದರಾದ ಓ.ಬೋರಯ್ಯ, ಬಿ.ಗೋವಿಂದರಾಜು, ಯುವ ಸಾಹಿತಿ ದ್ಯಾವರನಹಳ್ಳಿ ಡಿ.ಬಿ.ಆನಂದ್, ಸಂಘಟನೆಯ ಅಧ್ಯಕ್ಷ ಜಗದೀಶ್, ನಿರಂತರ ಕನ್ನಡ ಸೇವೆ ಅಧ್ಯಕ್ಷ ರಾಮರೆಡ್ಡಿ, ರಘು ನಿರಂತರ ಕನ್ನಡ ಸೇವೆ ಅಧ್ಯಕ್ಷ ಶಿವಲಿಂಗಪ್ಪ, ಕೃಷಿ ಕ್ಷೇತ್ರ ಲೋಕಮಾನ್ಯ, ಪತ್ರಿಕೋಧ್ಯಮದಲ್ಲಿ ಹೆಚ್.ಟಿ.ಮಂಜುನಾಥ್, ಬರಹಗಾರರಾದ ದೊಡ್ಡೆರಿ ಡಿ.ಶ್ರಿನಿವಾಸ್, ಕರ್ನಾಟಕ ರಕ್ಷಣಾ ವೇಧಿಕೆ ಅಧ್ಯಕ್ಷ ವೆಂಕಟೇಶ್(ಸ್ವಪ್ನ),ಯುವ ಕರ್ನಾಟಕ ರಕ್ಷಣಾ ವೇಧಿಕೆ ಅಧ್ಯಕ್ಷ ಹೆಚ್.ಎನ್.ಆದರ್ಶ್ ರಾಜ್,ಸ್ವಾಭಿಮಾನಿ ಬಣದ ಅಧ್ಯಕ್ಷ ವಿನಯ್ ಕುಮಾರ್, ಕನ್ನಡ ಸಂಸ್ಕೃತಿ ಚಿಂತಕರಾದ ಕೆ.ಜೆ.ಮಂಜುನಾಥ್ ರವರಿಗೆ ಸನ್ಮಾನಿಸಿ ಅಂಭಿನAದಿದರು.
ಕಾರ್ಯಕ್ರದಲ್ಲಿ ನಗರಸಭೆ ಸದಸ್ಯೆ ಸಿ.ಬಿ.ಜಯಲಕ್ಷಿö್ಮ, ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ವೈ.ಪ್ರಕಾಶ್, ಮಲ್ಲಿಕಾರ್ಜುನ, ನಿರ್ಮಲ, ಸುಮ, ಕೆ.ವೀರಭದ್ರಯ್ಯ, ಕವಿತ, ಸಾವಿತ್ರಿ, ಪೌರಾಯುಕ್ತ ಸಿ.ಚಂದ್ರಪ್ಪ, ಡಿವೈಎಸ್ಪಿ ಬಿಟಿ.ರಾಜಣ್ಣ, ಸಿಪಿಐ ಕೆ.ಸಮಿವುಲ್ಲಾ, ದೇಸಾಯಿ, ಬಿಇಒ ಸುರೇಶ್, ಬಿಸಿಎಂ ಅಧಿಕಾರಿ, ಅರಣ್ಯಾಧಿಕಾರಿ, ಸಿಡಿಪಿಒ ಹರಿಪ್ರಸಾದ್, ಕಾರ್ಮಿಕ ನಿರೀಕ್ಷಕಿ ಕುಸುಮ, ಎಇಇ ಕಾವ್ಯ, ಗಾಯಕ ಮುತ್ತುರಾಜ್, ಇತರರಿದ್ದರು.
ಫೊಟೋ. ಚಳ್ಳಕೆರೆ ನಗರದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣ ಸಮಿತಿವಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆವಹಿಸಿ ಮಾತನಾಡಿದರು.