ಇಡೀ ವಿಶ್ವವೇ ಒಪ್ಪುವಂತಹ ಶ್ರೀ ರಾಮಾಯಣ ಮಹಾ ಕಾವ್ಯವನ್ನು ಹೆಚ್ಚಿಸುವ ಮುಖಾಂತರ ಆದರ್ಶ ಮತ್ತು ದಾರ್ಶನಿಕರುಷನಾದಂತ ಶ್ರೀರಾಮರನ್ನು ಪರಿಚಯಿಸಿ ಶ್ರೀರಾಮನ ಆದರ್ಶ ಗುಣಗಳು ದೇಶದ ಮನೆ ಮನೆಗಳಲ್ಲಿ ಬೇರೂರು ವಂತೆ ಪರಿವರ್ತನೆ ಮಾಡಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಚಳ್ಳಕೆರೆ ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ. ಹೇಳಿದರು
ಅವರು ಇಂದು ನಾಯಕನಹಟ್ಟಿ ಪಟ್ಟಣದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಸಂಘ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸುಚೇತ ವಾಲ್ಮೀಕಿ ಮಹಿಳಾ ಸಂಘ ಇವರುಗಳ ನೇತೃತ್ವದಲ್ಲಿ ಏರ್ಪಡಿಸಿದ್ದಂತಹ ವಾಲ್ಮೀಕಿ ಜಯಂತೋತ್ಸವದಲ್ಲಿ ಭಾಗಿಯಾಗಿ ಮಾತನಾಡಿ ಶ್ರೀ ರಾಮಾಯಣ ಕಾವ್ಯದಲ್ಲಿ ಧರ್ಮ ಸತ್ಯ ಭಾತೃತ್ವ ಮತ್ತು ನಿಷ್ಠೆಯಿಂದ ಬದುಕುವ ಬಗ್ಗೆ ಉಲ್ಲೇಖವಿದೆ ಹಾಗೆಯೇ ಅಧರ್ಮ ಅನೀತಿ ದ್ವೇಷ ಅಸೂಯೆ ಮತ್ತು ಪರಸ್ತ್ರೀ ವ್ಯಾಮೋಹ ಇವುಗಳಿಂದ ಮನುಷ್ಯನ ಅವನತಿಯು ಹೇಗೆಂದು ಮಹರ್ಷಿ ವಾಲ್ಮೀಕಿ ಅವರು ಈ ಮಹಾ ಕಾವ್ಯದಲ್ಲಿ ಅನಾವರಣಗೊಳಿಸಿದ್ದಾರೆ
ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಆದರ್ಶಗಳಿಗೂ ಮತ್ತು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳಿಗೂ ಒಂದಕ್ಕೊಂದು ಸಾಮ್ಯತೆ ಇದೆ ಸಾಮಾಜಿಕ ಅಸಮತೋಲನತೆ ಪರಿಶ್ರಮ ಮತ್ತು ನಿಷ್ಠೆಯ ಬಗ್ಗೆ ಇಬ್ಬರು ಕೂಡ ಪ್ರತಿಪಾದಿಸಿದ್ದಾರೆ ಪಾಶ್ಚ್ಯಾತ ರಾಷ್ಟ್ರಗಳಲ್ಲಿ ಇವತ್ತು ಶ್ರೀ ರಾಮಾಯಣ ಮಹಾಕಾವ್ಯವನ್ನು ಪಠಣ ಮಾಡುತ್ತಾರೆಂದರೆ ಅದು ಭಾರತೀಯರ ಹೆಮ್ಮೆಯ ವಿಚಾರ ಆದರೂ ಕೂಡ ಮಹರ್ಷಿ ವಾಲ್ಮೀಕಿ ಅವರು ಮತ್ತು ಡಾ. ಬಿಆರ್ ಅಂಬೇಡ್ಕರ್ ಅವರ ಆಸೆಗಳಂತೆ ಸರಿ ಸಮಾನ ಆದಂತಹ ಸಮಾಜದ ನಿರ್ಮಾಣವಾಗಬೇಕು ಸಮಾಜದಲ್ಲಿ ಸಂಕಷ್ಟದಲ್ಲಿರುವಂತಹ ಜನರ ನೆರವಿಗೆ ಉಳ್ಳವರು ನಿಲ್ಲಬೇಕು ಸಂಪತ್ತು ಹಂಚಿಕೆ ಆಗಬೇಕು ಸಂವಿಧಾನದ ಮತ್ತು ಮೀಸಲಾತಿಯ ನೆರವಿನಿಂದ ಬದುಕು ಕಟ್ಟಿಕೊಂಡಂತಹ ಜನ ಸ್ವಾರ್ಥಿಗಳಾಗಬಾರದೆಂದು ಈ ಇಬ್ಬರು ದರ್ಶನಿಕರ ಆಶಯವಾಗಿತ್ತು ಇವತ್ತು ನಾವು ನೀವೆಲ್ಲರೂ ಕೂಡ ಸಂವಿಧಾನದ ಆಶಯದಂತೆ ಮೀಸಲಾತಿ ಉಂಡಂತವರು ಸಮಾಜದಲ್ಲಿ ಧ್ವನಿ ಇಲ್ಲದವರ ಮತ್ತು ಅಸಹಾಯಕರ ನೆರವಿಗೆ ನಿಂತು ಸಮಾಜದ ಬದಲಾವಣೆಗೆ ಇಂದಿನಿಂದಲೇ ಮುನ್ನುಡಿ ಬರೆಯೋಣವೆಂದು ಹೇಳಿದರು
ಹಟ್ಟಿ ಮಲ್ಲಪ್ಪ ನಾಯಕ ಟ್ರಸ್ಟ್ ಅಧ್ಯಕ್ಷ ಪಟೇಲ ಜಿ ಎಂ ತಿಪ್ಪೇಸ್ವಾಮಿ ಎತ್ತಿನಟಿಗೌಡ್ರು, ಮಾತನಾಡಿ ಈ ಟ್ರಸ್ಟಿಗೆ ಇವತ್ತು ಸುಸಜ್ಜಿತವಾದ ಒಂದು ಕಟ್ಟಡವನ್ನು ಹೊಂತಿಕೆ ರೂಪದಲ್ಲಿ ಪ್ರಮಾಣ ಮಾಡಲಾಗಿದೆ ಈ ಕಟ್ಟಡ ಮುಂದಿನ ದಿನಗಳಲ್ಲಿ ಸದ್ವಿನಿಯೋಗವಾಗಬೇಕು ಹೊಸಜ್ಜಿತವಾದಂತ ಲೈಬ್ರರಿ ಮತ್ತು ಜನಾಂಗದ ಏಳಿಗೆಗೆ ಇಲ್ಲಿ ಒಂದು ಸಲಹಾ ಕೇಂದ್ರವನ್ನು ಕೂಡ ತೆರೆಯಲಾಗುತ್ತದೆ ಈ ಮುಖಾಂತರ ನಾಯಕನಹಟ್ಟಿ ಮತ್ತು ತಳಕು ಹೋಬಳಿಯಲ್ಲಿನ ಜನಾಂಗದ ಜನರಿಗೆ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು
ಕಟ್ಟಡದ ಉದ್ಘಾಟನೆ ನಂತರ 20ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಸಾವಿರಾರು ಜನರು ಡಿಜೆ ಎಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು ಸಾವಿರಾರು ಯುವಕರು ವಾಲ್ಮೀಕಿ ಅವರ ಜಯ ಘೋಷಗಳೊಂದಿಗೆ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ತಿಪ್ಪೇಸ್ವಾಮಿ, ನೇರಲಗುಂಟೆ ಬೈಯಣ್ಣ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ ಗೌಡ್ರು ನಾಗರಾಜ್, ಹನುಮಣ್ಣ, ಚಿನ್ನಯ್ಯ ಎಸ್ ಓಬಯ್ಯ, ಪ್ರಭುಸ್ವಾಮಿ, ಬಾಲರಾಜ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಸ್ ಬಸವರಾಜ್, ಬಂಡೆ ಕಪಿಲೆ ಓಬಣ್ಣ,ಜಿ ಬಿ. ಮುದಿಯಪ್ಪ,ಟಿ ಬಸಪ್ಪ ನಾಯಕ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಮುಖಂಡರಾದ ಏಜೆಂಟ್ ಪಾಲಯ್ಯ, ಬೋರ್ ಸ್ವಾಮಿ, ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ, ಬಾಲಾಜಿ ಸ್ಟೋರ್ ಕೇಶವಮೂರ್ತಿ ,ಬಂಗಾರಿ , ಗುಂತುಕೋಲಮ್ಮನಹಳ್ಳಿ ಜೆಸಿಬಿ ತಿಪ್ಪೇಸ್ವಾಮಿ, ಕೆ ಟಿ ಮಲ್ಲಿಕಾರ್ಜುನ್, ಜಿ ಎಂ ಜಯಣ್ಣ ಅಬ್ಬೇನಹಳ್ಳಿ ಪಡ್ಲ ಬೋರಯ್ಯ, ಎಸ್ ಶಿವ ತಿಪ್ಪೇಸ್ವಾಮಿ, ಸೇರಿದಂತೆ ಎಲ್ಲಾ ಪಟ್ಟಣ ಪಂಚಾಯತಿ ಸದಸ್ಯರು ತಳಕು ಮತ್ತು ನಾಯಕನಹಟ್ಟಿ ಹೋಬಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಮತ್ತು ನಾಯಕನಹಟ್ಟಿ ಸಮಸ್ತ ನಾಯಕ ಸಮುದಾಯದ ಮುಖಂಡರು ಯುವಕರು ಮಹಿಳೆಯರು ಮತ್ತು ಎಲ್ಲಾ ಸಮುದಾಯದ ಮುಖಂಡರು ಸಾರ್ವಜನಿಕರು ಪಾಲ್ಗೊಂಡಿದ್ದರು