ಅಕ್ರಮ ಮರಳು ಸಾಗಾಟ ಟ್ರಾಕ್ಟರ್ ವಶ ಪ್ರಕರಣ ದಾಖಲು.
ಚಳ್ಳಕೆರೆ : ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮರಳು ಹಾಗೂ ಟ್ರಾಕ್ಟರ್ ವಶಪಡಿಸಿಕೊಂಡು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಳ್ಳಕೆರೆ ತಾಲೂಕಿನ ರೆಡ್ಡಿಹಳ್ಳಿ ಗ್ರಾಮದ ಹಳ್ಳದಲ್ಲಿ ಚಾಲಕ ಪಾಪಣ್ಣ(26) ಹಳೆ ಮಹೇಂದ್ರ ಕಂಪನಿಯ ಟ್ಯಾಕ್ಟರ್, ಯಾವುದೇ ಪರವಾನಿಗೆ ಪಡೆಯದೆ ಅಕ್ರಮ ಮರಳನ್ನು ತುಂಬಿಕೊAಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ರೆಡ್ಡಿಹಳ್ಳಿ ಗ್ರಾಮದಿಂದ ಚಳ್ಳಕೆರೆ ಕಡೆ ಮರಳು ತುಂಬಿಕೊAಡು ಬರುವಾಗ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ
ದಾಳಿಯಲ್ಲಿ ಚಳ್ಳಕೆರೆ ಠಾಣೆಯ ಪಿಐ ಆರ್.ಎಫ್ ದೇಸಾಯಿ. ಪಿಎಸ್ಐ ಶಿವರಾಜ್, ವಿಶಾಲ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು