ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಚಳ್ಳಕೆರೆ:ತಾಲೂಕಿನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ತೊಗರಿ ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿದ್ದು 2025 26ನೇ ಸಾಲಿನ ಮುಂಗಾರು ಹಂಗಾಮಿನ ಮಧ್ಯಂತರ ಪರಿಹಾರವಾಗಿ ಶೇಕಡ 25 ರಷ್ಟು ಬೆಳೆ ಪರಿಹಾರ ಮಂಜೂರು ಮಾಡುವಂತೆ ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ಶೇಂಗಾ ಮತ್ತು ತೊಗರಿ ಬೆಳೆಗಾರರ ಸಂಘದ ರೈತರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ.ಸಿ ಶಿವಲಿಂಗಪ್ಪ ಚಳ್ಳಕೆರೆ ತಾಲೂಕು ಮುಂಗಾರು ಹಂಗಾಮಿನ ತೊಗರಿಬೆಳೆಗೆ ಆಗಸ್ಟ್ ನಿಂದ ಅಕ್ಟೋಬರ್ ವರಗೆ ಸಂಪೂರ್ಣ ಮಳೆ ಇಲ್ಲದಿರುವುದರಿಂದ ದೀರ್ಘಕಾಲದ ತೇವಾಂಶ ಕೊರತೆಯಿಂದಾಗಿ ತೊಗರಿ ಬೆಳೆಯ ಇಳುವರಿ ಶೇಕಡ 50ಕ್ಕಿಂತ ಹೆಚ್ಚು ಕುಂಠಿತವಾಗಿರುವುದರಿಂದ ರೈತರು ತೊಗರಿ ಬೆಳೆಯಿಂದಾಗಿ ಕೈಸುಟ್ಟುಕೊಂಡಿದ್ದಾರೆ ಬೆಳಗಾಗಿ ಮಾಡಿದ ಸಾಲ ತೀರಿಸಲಾಗಿದೆ ಹತಾಶರಾಗಿ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಕೃಷಿ,ತೋಟಗಾರಿಕೆ ಹಾಗೂ ಬೆಳೆವಿಮೆ ಕಂಪನಿಗಳು ಜಂಟಿ ಸರ್ವೆ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ಸೂಚನೆ ನೀಡಿದ್ದರು ಸಹ ವಿಮಾ ಕಂಪನಿ ಮಾಲೀಕರು ಸರ್ವೆ ಕಾರ್ಯದಲ್ಲಿ ಪಾಲ್ಗೊಳ್ಳದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ ಒಟ್ಟಾರೆ ಸಮೀಕ್ಷೆಯಲ್ಲಿ ತೊಗರಿ ಗಿಡಗಳು ಮಳೆ ಬಾರದ ಹಿನ್ನೆಲೆಯಲ್ಲಿ ಬೆಳೆಗಳಲ್ಲಿ ಕಡಿಮೆ ಹೂ ಹಿಡಿದಿದ್ದು ಮೇಲ್ನೋಟಕ್ಕೆ ಕಾಯಿಗಳು ಕಂಡರು ಒಳಗಿನ ಕಾಳುಗಳು ಸೀಕಲುಗೊಂಡಿದ್ದು ಮಾರುಕಟ್ಟೆಯಲ್ಲಿ ಇಂತಹ ಕಾಳುಗಳಿಗೆ ಕಡಿಮೆ ಬೇಡಿಕೆ ಹಾಗೂ ಕಡಿಮೆ ದರ ಇರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ವಾಡಿಕೆ ಮಳೆಯಾದಲ್ಲಿ ರೈತರು ಉತ್ತಮ ಫಸಲು ಪಡೆಯಲು ಸಾಧ್ಯ ವಾಸ್ತವವಾಗಿ ಮಳೆ ಬಾರದೆ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸಿದ್ದಾರೆ ಕೂಡಲೇ ಸರ್ಕಾರ ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರವಾಗಿ ಶೇಕಡ 25ರಷ್ಟು ಬೆಳೆ ಪರಿಹಾರ ಮೊತ್ತವನ್ನು ತಕ್ಷಣ ವಿಳಂಬ ಮಾಡದೆ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಎಸ್ ಪ್ರಕಾಶ್ ಉಪಾಧ್ಯಕ್ಷ ಕರಿಯಪ್ಪ ಹಕಾರಿದರ್ಶಿ ಆರ್ಎ ದಯಾನಂದ ಮೂರ್ತಿ ಡಿ ಭರತೇಶ ರೆಡ್ಡಿ ವೀರಣ್ಣ ಸಿರಿದಂತೆ ಹಲವರು ಉಪಸ್ಥಿತರಿದ್ದರು

