ಶೇಂಗಾ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ
ಚಳ್ಳಕೆರೆ: ಬಯಲು ಸೀಮೆಯ ಬರದ ನಾಡಿನ ಬಾದಾಮಿ ಎಂದೇ ಖ್ಯಾತಿ ಪಡೆದಿರುವ ಶೇಂಗಾವನ್ನು ಒಂದು ಕ್ವಿಂಟಲ್ ಗೆ 10,000ಗಳನ್ನು ನಿಗದಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ
ಕೃಷಿ ಅಧಿಕಾರಿ ಜೆ ಅಶೋಕ್ ಮಾತನಾಡಿ ರೈತರ ಮನವಿಯನ್ನು ಈಗಾಗಲೇ ಕೃಷಿ ಸಚಿವರಿಗೆ ಪತ್ರದ ಮೂಲಕ ತಿಳಿಸಲಾಗಿದ್ದು ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುವ ಭರವಸೆ ಇದೆ ಎಂದು ತಿಳಿಸಿದರು.
ರೈತರ ಮನವಿಯನ್ನು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ತಲುಪಿಸಲಾಗುವುದು ಎಂದು ತಹಶೀಲ್ದಾರ್ ರೆಹಾನ್ ಪಾಷಾ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಟಿ ತಿಪ್ಪೇಸ್ವಾಮಿ ಶ್ರೀಕಂಠ ಮೂರ್ತಿ ಎಂ ಎನ್ ಚನ್ನಕೇಶವ ಮೂರ್ತಿ ಎಚ್ ಚಂದ್ರಪ್ಪ ಪಾಲಯ್ಯ ಪ್ರಕಾಶ್ ಸಿರಿಯಪ್ಪ ಪಾಪಣ್ಣ ಜಯಣ್ಣ ಗುರುಮೂರ್ತಿ ಆರ್ ಸಂಜೀವ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

