ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಅಂಗವಾಗಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು,
ಅಹಿಂಸೆ ಸಾಧನ, ಸತ್ಯವೇ ಅದರ ಸಿದ್ಧಿ. ಸತ್ಯದ ಅಥವಾ ದೇವರ ಸಾಕ್ಷಾತ್ಕಾರಕ್ಕೆ ಅಹಿಂಸೆಯಲ್ಲದೆ ಅನ್ಯ ಮಾರ್ಗವೇ ಇಲ್ಲ ಎಂಬುದನ್ನು ಮನಗಂಡ ಇವರು ಅಹಿಂಸೆಯ ಆಚರಣೆಗೆ ತಮ್ಮ ಬಾಳಿನ ಸರ್ವಸ್ವವನ್ನೂ ಪಣವಾಗಿಟ್ಟರು.
ಇವರ ಅಂತರಂಗ ಬಹಿರಂಗ ಜೀವನವನ್ನೆಲ್ಲಾ ಇದು ವ್ಯಾಪಿಸಿತು. ತ್ರಿಕರಣಪುರ್ವಕ ಅಹಿಂಸೆಯ ಆಚರಣೆಯಲ್ಲಿ ತೊಡಗಿದ ಇವರು ಅಹಿಂಸೆಯನ್ನು ಕುರಿತು ಹೇಳಿರುವ ಮಾತುಗಳು ಋಷಿ ವಾಣಿಯಂತೆ ಪ್ರಮಾಣವಾಕ್ಯಗಳಾಗಿವೆ ಎಂದರು.
ಈದೇ ಸಂದರ್ಭದಲ್ಲಿ ಬಿಸಿಎಂ ಅಧಿಕಾರಿ ರಮೇಶ್, ಶಿರಸ್ತೆದಾರ್ ಗಿರೀಶ್, ಸದಾಶಿವಪ್ಪ, ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ವಿಎ.ಪ್ರಕಾಶ್, ಹಾಗೂ ಕಂದಾಯ ಸಿಬ್ಬಂದಿ ವರ್ಗ ಇತರರು ಇದ್ದರು.

