“ಶ್ರೀಮಾತೆ ಶಾರದಾದೇವಿಯವರ ಸಾಮಾಜಿಕ ಕಳಕಳಿ ಬಹಳ ದೊಡ್ಡದು”:- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ಹೊಂದಿದ್ದ ಸಾಮಾಜಿಕ ಕಳಕಳಿ ಬಹಳ ದೊಡ್ಡದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶಾರದಾಮಾತೆಯವರ ಚಿಂತನೆಗಳ” ಬಗ್ಗೆ ವಿಶೇಷ ಪ್ರವಚನ ನೀಡಿದರು. ಶ್ರೀಮಾತೆಯವರು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಬಾಹ್ಯಾಡಂಬರವನ್ನು ಇಷ್ಟಪಡದ ಅವರು ಸರಳ ಜೀವನವನ್ನು ಪ್ರೋತ್ಸಾಹಿಸುತ್ತಿದ್ದರು.ಸದಾ ಕಾರ್ಯನಿರತರಾಗಿರುವುದರಿಂದ ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಸುಳಿಯುವುದಿಲ್ಲ ಎಂಬ ಶಾರದಾದೇವಿಯವರ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ಈ ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ, ದಿವ್ಯತ್ರಯರಿಗೆ ಮಂಗಳಾರತಿ, ಕುಮಾರಿ ಪ್ರತೀಕ್ಷಾ ಅವರಿಂದ ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಪಠಣ ನಡೆಯಿತು. ಸತ್ಸಂಗ ಕಾರ್ಯಕ್ರಮದಲ್ಲಿ ರುದ್ರಸ್ವಾಮಿ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ಜಿ ಯಶೋಧಾ ಪ್ರಕಾಶ್, ಗೀತಾ ವೆಂಕಟೇಶ್ ರೆಡ್ಡಿ,ಅನ್ವಿಕಾ, ಚೇತನ್, ಸುದೀಪ್, ಚೆನ್ನಕೇಶವ,ಭಾವನಾ, ಕವಿತಾ, ರಶ್ಮಿ ವಸಂತ, ಯಶಸ್ವಿ, ಸಿ.ಎಸ್.ಭಾರತಿ ಚಂದ್ರಶೇಖರ್, ಪಂಕಜಾ,ಡಿ.ಕಾವೇರಿ ಸುರೇಶ್,ಸುಮನಾ ಸೇರಿದಂತೆ ಸದ್ಭಕ್ತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!