ಚಳ್ಳಕೆರೆ :

ದಿ.ಡಿ.ದೇವರಾಜ್ ಅರಸು ಜಯಂತಿಯನ್ನು ಎಲ್ಲಾ ಜನಾಂಗದವರು, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಜಯಂತಿಯನ್ನು ಆಚರಿಸೋಣ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು ನಗರದ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ದಿ.ಡಿ.ದೇವರಾಜ್ ಅರಸು ಜಯಂತಿ ಅಂಗವಾಗಿ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು,

ನಗರದ ಪಾವಗಡ ರಸ್ತೆಯಲ್ಲಿರುವಂತಹ ಬಿಸಿಎಂ ಹಾಸ್ಟೆಲ್ ಆವರಣದಲ್ಲಿ ಆಗಸ್ಟ್ 20ರಂದು ದಿವಂಗತ ಡಿ.ದೇವರಾಜ್ ಅರಸ್ ಜಯಂತಿಯನ್ನು ಅರ್ಥಗರ್ಭಿತವಾಗಿ ಆಚರಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಓ ಶಶಿಧರ್,
ಬಿಸಿಎಂ ಅಧಿಕಾರಿ ರಮೇಶ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ದೇವ್ಲಾ ನಾಯಕ, ತಾಲೂಕು ಪಂಚಾಯಿತಿ ಕೃಷಿ ಅಧಿಕಾರಿ ಅಶೋಕ್, ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾಕ್ಟರ್ ಶ್ರೀನಿವಾಸ್, ಆರೋಗ್ಯ ಆರೋಗ್ಯ ಇಲಾಖೆಯ ತಿಪ್ಪೆ ಸ್ವಾಮಿ ,ಸಿ ಡಿ ಪಿ ಓ ರಾಜ ನಾಯಕ್, ನಗರಸಭೆ ಆರೋಗ್ಯ ನಿರ್ದೇಶಕ ಗಣೇಶ್ ,ಬಿ ಸಿ ಎಂ ಹಾಸ್ಟೆಲ್ ವಾರ್ಡನ್ನ ಬಂಗಾರಮ್ಮ, ಅಬಕಾರಿ ಇನ್ಸ್ಪೆಕ್ಟರ್ ತಿಪ್ಪಯ್ಯ, ಲೀಲಾವತಿ ,ಅರಣ್ಯ ಅಧಿಕಾರಿ ರಾಜೇಶ್, ಲೋಕಉಪಯೋಗಿ ಇಲಾಖೆ ಸಿಬ್ಬಂದಿ ಸಿದ್ದಪ್ಪ,, ಹಾಗೂ ನಿವೃತ್ತ ಪ್ರಾಂಶುಪಾಲರಾದ ಶಿವಲಿಂಗಪ್ಪ ಇತರರು ಭಾಗವಹಿಸಿದ್ದರು

About The Author

Namma Challakere Local News
error: Content is protected !!