filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಚಳ್ಳಕೆರೆ : ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಎಂಟು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಇಂದು ವಿಕೋಪಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ .

ಇನ್ನು ಸಂತ್ರಸ್ತ ಕುಟುಂಬಗಳು ತಾಲೂಕ ಕಚೇರಿ ಮುಂಭಾಗದ ರಸ್ತೆ ಪಕ್ಕದ ಫುಟ್ ಪಾತ್ ಮೇಲೆ ಸೌದೆ ಒಲೆಯ ಮೇಲೆ ಅಡುಗೆ ಮಾಡುವುದರ ಮೂಲಕ ವಿನೂತನವಾಗಿ ತಾಲೂಕು ಆಡಳಿತಕ್ಕೆ ಹಾಗೂ ಜಿಲ್ಲಾ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಸುಮಾರು ಕುಟುಂಬಗಳು ಸೌದೆ ಒಲೆಯಲ್ಲಿ ಅಡುಗೆ ಮಾಡಿ ಫುಡ್ ಬಾತ್ ಮೇಲೆಯ ಧರಣಿ ಸ್ಥಳದಲ್ಲಿ ಊಟ ಸವಿಯುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಇನ್ನು ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಟಿಡಿ.ರಾಜಗಿರಿ ಜಿಲ್ಲಾ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಕಳೆದ ಎಂಟು ದಿನಗಳಿಂದ ಮಳೆ, ಗಾಳಿ ಚಳಿ ಎನ್ನದೆ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದೆವೆ ಆದರೆ ಜಿಲ್ಲಾಡಳಿತ, ತಾಲೂಕು ಆಡಳಿತ ಇತ್ತ ಕಡೆ ಗಮನಹರಿಸದೆ ಸಂತ್ರಸ್ತ ಕುಟುಂಬಗಳಿಗೆ ಇನ್ನಷ್ಟು ಸಮಸ್ಯೆ ಆಗುವ ನಿಟ್ಟಿನಲ್ಲಿ ನಡೆದುಕೊಳ್ಳುತ್ತಿದೆ ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ದರಣಿ ನಿರತ ಮಹಿಳೆಯರು ರಸ್ತೆ ಪಕ್ಕದ ಫುಟ್ಪಾತ್ ಮೇಲೆ ಸೌದೆ ಒಲೆಯ ಮೇಲೆ ಅಡುಗೆ ಬೇಯಿಸುವುದರ ಮೂಲಕ ದಾರಿಹೋಕರನ್ನು ಕೈಬೀಸಿ ಕರೆಯುತ್ತಾ ಸಂತ್ರಸ್ತರ ನೋವಿನ ಊಟ ಸಿದ್ಧವಿದೆ ಎಂಬ ಪ್ರತಿಭಟನೆಯ ಕೂಗು ಎಲ್ಲೆಡೆ ಹಬ್ಬಿತು.

ಇನ್ನು ಜಿಲ್ಲಾಧಿಕಾರಿ ಬರವಿಕೆಗಾಗಿ ರಸ್ತೆ ಪಕ್ಕದ ಫುಟ್ ಬಾತ್ ಮೇಲೆ ಅಡಿಗೆ ತಯಾರಿಸಿದ್ದೇವೆ ಎಂದು ಧರಣಿ ನಿರತ ಮಹಿಳೆಯರು ಮೌನ ಮುರಿದಿದ್ದಾರೆ.

.

ಇದೇ ಸಂಧರ್ಭದಲ್ಲಿ
ಹೆಚ್ ಮಂಜುನಾಥ್ ಜಿಲ್ಲಾಧ್ಯಕ್ಷರು ದಲಿತ ಸಂಘರ್ಷ ಸಮಿತಿ… ತಿಮ್ಮಪ್ಪ, ಕೆ ಎಂ ಎಸ್ ಹರೀಶ್ ಕೊನಿಗಾರಹಳ್ಳಿ , ಹನುಮಂತ , ಹಾಗೂ ಬೀರನಹಳ್ಳಿಯ ತಿಪ್ಪೇಸ್ವಾಮಿ, ರತ್ನಮ್ಮ, ಹೋರಾಟದಲ್ಲಿ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!