ಚಳ್ಳಕೆರೆ : ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸ್ಥಳೀಯ ಗ್ರಾಮ ಪಂಚಾಯತಿ ಸೂಕ್ತವ್ಯವಸ್ಥೆ ಕಲ್ಪಿಸಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಅವರು
ತಾಲೂಕಿನ ಗೌರಸಮುದ್ರ ಮಾರಮ್ಮ ದೇವಿಯ ತುಮುಲು ಸಂವಿಧಾನಕ್ಕ ಬೇಟಿ ನೀಡಿ ದೇವಾಲಕ್ಕೆ ಬರುವಂತಹ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ, ಹಾಗೆಯೇ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಗಳು ಅಂಗಡಿಗಳು ಇತರೆ ಅಂಗಡಿಗಳು ದೇವಸ್ಥಾನದ ಮುಂಭಾಗ ಮತ್ತು ಹತ್ತಿರದಲ್ಲಿ ಯಾವುದೇ ಕಾರಣಕ್ಕೂ ಅಂಗಡಿಗಳನ್ನು ಹಾಕುವಂತಿಲ್ಲ, ಭಕ್ತಾದಿಗಳಿಗೆ ತೊಂದರೆ ಆಗದ ರೀತಿಯಲ್ಲಿ ದೇವಸ್ಥಾನದ ಆಚೆ ಅಂಗಡಿಗಳನ್ನು ಹಾಕಿಕೊಳ್ಳಿ ಎಂದು ಎಚ್ಚರಿಸಿದರು, ಇನ್ನೂ ಅಂಗಡಿಗಳಲ್ಲಿ ಮಧ್ಯಪಾನ ಮರಾಟ ಮಾಡುವಂತಿಲ್ಲ , ಸ್ವಚ್ಛತೆಯನ್ನು ಕಾಪಾಡಬೇಕು, ಇನ್ನೂ ದೇವಾಸ್ಥಾನ ಸಮೀಪದಲ್ಲಿರುವ ಎಲ್ಲಾ ಅಂಗಡಿಗಳಿಗೆ ನೋಟಿಸ್ ನೀಡಲು ಸೂಚಿಸಿದರು, ಗೌರಸಮುದ್ರ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗವನ್ನು ಗುರುತಿಸಿ, ಸೂಕ್ತ ತಡೆಗೋಡೆ ನಿರ್ಮಿಸಲು ಗ್ರಾಮ ಪಂಚಾಯತಿ ಅಧ್ಯಕ್ಷ ಓಬಣ್ಣ ಗೆ ಸೂಚಿಸಿದರು.

ಇನ್ನೂ ಗ್ರಾಮ‌ ಪಂಚಾಯತಿ ಸದಸ್ಯ ವಕೀಲರಾದ ಶಶಿಕುಮಾರ್ ಮಾತನಾಡಿ, ಗೌರಸಮುದ್ರ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತದೆ, ಇದರಿಂದ ದೇವಸ್ಥಾನಕ್ಕೆ ಬಂದ ಭಕ್ತಾಧಿಗಳು ಕೊಳಚೆ ನೀರು ತಿಳಿದುಕೊಂಡು ದೇವಸ್ಥಾನಕ್ಕೆ ಬರಬೇಕಾದ ಅನಿವಾರ್ಯ ವಿದೆ , ಆದ್ದರಿಂದ ‌ಚರಂಡಿ ನಿರ್ಮಿಸಿ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆದ್ದರಿಂದ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ, ತುರ್ತಾಗಿ ರಸ್ತೆ ಅಗಲೀಕರಣ ಮಾಡಬೇಕು ಎಂದರು.

ಇನ್ನೂ ಕೆರೆ ಕಾಲುವೆಯನ್ನು ಒತ್ತುವರೆ ಮಾಡಿರುವಂತಹ ವ್ಯಕ್ತಿಗಳಿಗೆ ನೋಟಿಸ್ ಕೊಡುವಂತೆ ಸಣ್ಣ ನೀರಾವರಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು , ಇನ್ನು ಮುಂದೆ ಗೌರಸಮುದ್ರ ಮಾರಮ್ಮ ದೇವಿಯ ಸನ್ನಿಧಾನದಲ್ಲಿ ಪ್ರತಿ ಮಂಗಳವಾರದಂದು ಅನ್ನದಾಸೋಹ ನಡೆಸುವ ಸ್ಥಳವನ್ನು ಪರಿಶೀಲಿಸಲಾಯಿತು,

ಹೇಳಿಕೆ :

ರಾಜ್ಯದಲ್ಲಿ ಹೆಸರುವಾಸಿಯಾಗಿರುವ ಮಧ್ಯ ಕರ್ನಾಟಕದ ಶಕ್ತಿ ದೇವತೆ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಪ್ರತಿ ಮಂಗಳವಾರ ನೂರಾರು ಭಕ್ತರು ರಾಜ್ಯವಲ್ಲದೆ, ಆಂದ್ರ ಪ್ರದೇಶದಿಂದ ದರ್ಶನಕ್ಕೆ ಆಗಮಿಸುತ್ತಾರೆ ಆದ್ದರಿಂದ ಅನ್ನದಾಸೋಹದ ಮೂಲಕ ಭಕ್ತರ ಹಸಿವು ನೀಗಿಸು ಕಾರ್ಯವಾಗುತ್ತದೆ, ಆದ್ದರಿಂದ ಇಂದಿನ ಪ್ರತಿ ಮಂಗಳವಾರ ಅನ್ನದಾಸೋಹ ಮಾಡಲಾಗುತ್ತದೆ.

— ಎಂ.ಓಬಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷ ಗೌರಸಮುದ್ರ.

ಈದೇ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಲಿಂಗೇಗೌಡ, ಸರ್ವೆ ಅಧಿಕಾರಿ ಪ್ರಸನ್ನ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಂ ಓಬಣ್ಣ, ಗ್ರಾಮ ಪಂಚಾಯತಿ ಸದಸ್ಯ ಜಿಎಂ ಈರಣ್ಣ, ಟಿ. ಶಶಿಕುಮಾರ್, ವಕೀಲರಾದ ಎಂ ಚಂದ್ರಣ್ಣ, ಮಾರಣ್ಣ, ನಾಗರಾಜ್, ರಾಜಶೇಖರ್, ಪಾಲಯ್ಯ, ಚಂದ್ರಣ್ಣ, ಊರಿನ ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!