ಚಳ್ಳಕೆರೆ :
ಚಿತ್ರದುರ್ಗ: ಸೆನ್ ಪೊಲೀಸರಿಂದ ಮೂವರು ಸೈಬರ್
ವಂಚಕರ ಬಂಧನ
ಷೇರು ಮಾರುಕಟ್ಟೆ ಹೆಸರಲ್ಲಿ ವಂಚಿಸಿದ್ದ ಮೂವರನ್ನು ಬಂಧಿಸುವಲ್ಲಿ
ಚಿತ್ರದುರ್ಗದ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.
.
ಸ್ಟಾಕ್ ಇನ್ವೆಸ್ಟರ್ ಡಿಸ್ಕಷನ್ ಗ್ರೂಪ್ ಹೆಸರಲ್ಲಿ ವಂಚಿಸಿದ್ದ
ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 4. 5
ಲಕ್ಷ ಮೌಲ್ಯದ ಕಾರು 3 ಮೊಬೈಲ್ ವಶಕ್ಕೆ ಪಡೆದಿದೆ. ಬಂಧಿತರನ್ನು
ಉಡುಪಿಯ ಪೃಥೇಶ್ ಪೈ, ಕೊಪ್ಪ ಮೂಲದ ನಂದೀಶ್ ಮತ್ತು
ಬೆಂಗಳೂರಿನ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಎಸ್ಪಿ
ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ

