ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಶಿಕ್ಷಣ ಪಡೆದವರು ಘರ್ಜಿಸಲೇಬೇಕು ಓಬಯ್ಯನಹಟ್ಟಿ ಡಿ.ಟಿ. ಕಾಮರಾಜ್.

ನಾಯಕನಹಟ್ಟಿ:: ಓಬಯ್ಯನಹಟ್ಟಿ ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣ ಪಡೆಯುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಓಬಯ್ಯನಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿ.ಟಿ.ಕಾಮರಾಜ್ ಹೇಳಿದ್ದರು.

ಶನಿವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಓಬಯ್ಯನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿ ಸುಮಾರು 153 ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಣೆ ಮಾಡಿ ಮಾತನಾಡಿದರು ವಿದ್ಯಾರ್ಥಿ ಜೀವನ ಬಹಳ ವಿಶೇಷವಾದದ್ದು ಮಕ್ಕಳ ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು ಮುಂದೆ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಸಾಗಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತರುವ ಹಾಗೆ ಶಿಕ್ಷಣವನ್ನ ಪಡೆಯುವ ಮೂಲಕ ಮಾದರಿಯಾಗಬೇಕು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಎಸ್. ಆರ್. ಗಂಗಣ್ಣ ಮಾತನಾಡಿದರು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಡಿ ಟಿ ಕಾಮರಾಜ್ ರವರ ಕಾರ್ಯ ಶ್ಲಾಘನೀಯ ನಮ್ಮ ಶಾಲೆಯ 153 ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ವಿತರಣೆ ಮಾಡಿದ್ದಾರೆ ಶಾಲೆಯ ಶಿಕ್ಷಕರಿಂದ ಹಾಗೂ ಎಸ್ ಡಿ ಎಂ ಸಿ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಇನ್ನು ಶಾಲೆಯ ಸಹಶಿಕ್ಷಕಿ ಎಂ.ಮಂಜುಳ ಮಾತನಾಡಿದರು ಸುಮಾರು 16 ಸಾವಿರ ವೆಚ್ಚದ 153 ವಿದ್ಯಾರ್ಥಿಗಳಿಗೆ ತಟ್ಟೆಯಲ್ಲಿ ಊಟವನ್ನು ವಿತರಣೆ ಮಾಡಲಾಗಿದೆ ಈ ಹಿಂದೆ ವಿದ್ಯಾರ್ಥಿಗಳು ಮನೆಯಿಂದ ತಟ್ಟೆ ಲೋಟ ತರುವಂತ ಪರಿಸ್ಥಿತಿ ಇತ್ತು ಈಗ ಶಾಲೆಯಲ್ಲಿ ತಟ್ಟೆ ಲೋಟ ದಾನಿಗಳು ಕೊಟ್ಟಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸಮಾನತೆ ಭಾವನೆ ಜಾತಿ ಮನೋಭಾವ ಎಲ್ಲ ವಿದ್ಯಾರ್ಥಿಗಳಲ್ಲಿ ಸಮಾನರು ಎಂಬ ಭಾವನೆ ಕಂಡುಬರುತ್ತದೆ ಎಂದರು.

ಇದೆ ವೇಳೆ ಎಸ್ ಡಿಎಂ ಸಿ ಅಧ್ಯಕ್ಷ ಎಂ. ಪರ್ವತಯ್ಯ ಮಾತನಾಡಿದರು ಓಬಯ್ಯನಹಟ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಡಿಟಿ ಕಾಮರಾಜ್ ರವರ ಕೊಡುಗೆ ಅಪಾರ ಇಂತಹ ಧಾನಿಗಳು ನಮ್ಮ ಶಾಲೆಗೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕಿ ಕೆ.ವಿ. ಪ್ರಿಯ, ಅತಿಥಿ ಶಿಕ್ಷಕ ಶಿವಕುಮಾರ್ ಅನಂತಕುಮಾರ್ ಟಿ. ಗ್ರಾಮದ ಯುವ ಮುಖಂಡ ಎಂ. ಮಲ್ಲಿಕಾರ್ಜುನ್ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!