ಚಳ್ಳಕೆರೆ :
ಚಿತ್ರದುರ್ಗ: ವೈದ್ಯರು ನರ್ಸ್ ಗಳು ಸಾಮೂಹಿಕ ರಜೆ
ಮೇಲೆ ಹೋಗಿಲ್ಲ
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರ
ಅವರು ಭಾನುವಾರ ಮಾಧ್ಯಮಗಳಿಗೆ ತಿಳಿಸಿರುವಂತೆ, ಚಿತ್ರದುರ್ಗದ
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್ಗಳು ಯಾರೂ ರಜೆ
ಮೇಲೆ ತೆರಳಿಲ್ಲ. ಆಡಳಿತ ವರ್ಗದ 15 ಮಂದಿಯಲ್ಲಿ 8 ಜನರು
ಮಾತ್ರ ರಜೆ ಮೇಲೆ ಹೋಗಿದ್ದು, ಉಳಿದವರು ಕಚೇರಿ ಕೆಲಸವನ್ನು
ಯಾವುದೇ ಸಮಸ್ಯೆಯಿಲ್ಲದೆ ನಿರ್ವಹಿಸಿದ್ದಾರೆ. ರಜೆ ಮೇಲೆ
ತೆರಳಿದವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು
ಅವರು ಸ್ಪಷ್ಟಪಡಿಸಿದರು.

