ಕ್ರೀಡೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮುಖ್ಯವಲ್ಲ ಪ್ರದರ್ಶನ ಮುಖ್ಯ ಪಿಎಸ್ಐ ಪಾಂಡುರಂಗಪ್ಪ ಸಲಹೆ

ನಾಯಕನಹಟ್ಟಿ:: ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವ ಹೆಚ್ಚಿಸುವ ಮೂಲಕ ಕ್ರೀಡೆ ಸಹಕಾರಿಯಾಗಲಿದೆ ಎಂದು ಪಿಎಸ್ಐ ಪಾಂಡುರಂಗಪ್ಪ ಹೇಳಿದರು.

ಗುರುವಾರ ಪಟ್ಟಣದ ಬಿ.ಎಸ್ ಹೈಟೆಕ್ ಶಾಲೆಯಲ್ಲಿ 2025 26 ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟ ಶ್ರೀ ವಿದ್ಯಾಭಾರತಿ ಕರ್ನಾಟಕ ಚಿತ್ರದುರ್ಗ ಜಿಲ್ಲಾ ಕ್ರೀಡಾಕೂಟ ಶ್ರೀ ಶಾರದಾ ವಿದ್ಯಾ ಮಂದಿರ ನಾಯಕನಹಟ್ಟಿ ಇವರ ಸಹಯೋಗದೊಂದಿಗೆ ನಡೆಯುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು ವಿದ್ಯಾರ್ಥಿಗಳು ಉತ್ತಮ ಆರೋಗ್ಯವಂತರಾಗಿರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಚಿತ್ರದುರ್ಗ ವಿದ್ಯಾಭಾರತಿ ಜ್ಞಾನದೀಪ ಮಂದಿರ ಚಿತ್ರದುರ್ಗ ಕಾರ್ಯದರ್ಶಿ ನಾಗರತ್ನ ಮಾತನಾಡಿದರು ವಿದ್ಯಾಭಾರತಿ ಇಡೀ ದೇಶದಾದ್ಯಂತ ಒಂದು ಖಾಸಗಿ ಸಮಸ್ಯೆಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆಗಳನ್ನು ಆಡುವಾಗ ನೇಮಗಳನ್ನು ಪಾಲಿಸಬೇಕು ಈ ದಿನದ ಜಿಲ್ಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಉತ್ತಮ ಕ್ರೀಡೆಯನ್ನು ಆಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಬಿಎಸ್ ಹೈಟೆಕ್ ಶಾಲೆಯ ಕಾರ್ಯದರ್ಶಿ, ಬೋರಸ್ವಾಮಿ, ಶ್ರೀ ಶಾರದಾ ವಿದ್ಯಾ ಮಂದಿರ ವ್ಯವಸ್ಥಾಪಕಿ ಉಮಾ. ಶಾಲೆಯ ಮುಖ್ಯ ಶಿಕ್ಷಕ ಪಾಲಯ್ಯ, ಶಿಕ್ಷಕರಾದ ರಂಗನಾಥ್ ಸ್ವಾಮಿ, ಕೃಷ್ಣಮೂರ್ತಿ, ದೈಹಿಕ ಶಿಕ್ಷಕ ಮುರಳಿ ನಂದನ್ ವಿದ್ಯಾ ಸಂಸ್ಥೆ ಅಧ್ಯಕ್ಷ ಗೀತಾ ಬಾಲರಾಜ್ ಯಾದವ್,, ಶಿಕ್ಷಕಿ ಬಾನುಪ್ರಿಯ, ದಯಾನಂದ್ ಪ್ರಹ್ಲಾದ್, ಚಿತ್ರದುರ್ಗ ನಾನು ಭಾರತಿ ವಿದ್ಯೆ ಸಂಸ್ಥೆಯ ದೈಹಿಕ ಶಿಕ್ಷಕ ಬಸವನಗೌಡ, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಕೆ ಜಿ ಮಂಜುನಾಥ್ ಜೋಗಿಹಟ್ಟಿ, ಶಿವಪ್ರಸಾದ್, ಈಶ್ವರಪ್ಪ ಮಂಜುನಾಥ್
ತಿಪ್ಪೇರುದ್ರಪ್ಪ, ಉಮೇಶ್, ನಿಜಲಿಂಗಪ್ಪ, ಸೇರಿದಂತೆ ಶಾಲೆಯ ಶಿಕ್ಷಕ – ಶಿಕ್ಷಕಿಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!