ಚಳ್ಳಕೆರೆ :
ಪ್ರತಿಭಟನೆ ಸ್ಥಳಕ್ಕೆ ದಾವಿಸಿಲ್ಲ ಎಂದು ತಹಶಿಲ್ದಾರ್ ಕಛೇರಿಯ ಬಾಗಿಲಿಗೆ ಅಡ್ಡವಾಗಿ ಕುಳಿತು ಪ್ರತಿಭಟನೆ. :
ಗ್ರಾಮ ಪಂಚಾಯತಿ ಗೆ ಸರಬರಾಜು ಮಾಡಿದ ವಿದ್ಯುತ್ ಸಲಕರಣೆಗಳ ಬಿಲ್ ಪಾವತಿಸಿಲ್ಲ ಎಂದು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ದಾವಿಸಿ ಅನ್ಯಾಯವಾದರ ಸಮಸ್ಯೆ ಆಲಿಸಿಲ್ಲ ಎಂದು ಕರ್ನಾಟಕದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವರೆಡ್ಡಿ ನೇತೃತ್ವದಲ್ಲಿ ತಾಲ್ಲೂಕು ಕಛೇರಿಯ ಮುತ್ತಿಗೆ ಹಾಕುವ ಯತ್ನ ನಡೆಯಿತು.
ಹೌದು ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಗೆ ಕಳೆದ ವರ್ಷಗಳ ಹಿಂದೆ ವಿದ್ಯುತ್ ಬಲ್ಬ್ ಹಾಗೂ ಇತರೆ ಸಾಮಾಗ್ರಿಗಳನ್ನು ಸರಬರಾಜು ಮಾಡಿದ ಬಿಲ್ ಮೊತ್ತ ಸು.7,50,000 ಲಕ್ಷ ರೂಪಾಯಿಗಳು, ಬಾಕಿ ಹಣ ಬರಬೇಕು, ಆದರೆ ಪಿಡಿಓ, ಅಧ್ಯಕ್ಷರು ಹಣ ಕೊಡದೆ ಸತಯಿಸುತಿದ್ದಾರೆ, ಎಂದು ತಾಲ್ಲೂಕು ಪಂಚಾಯತ ಮುಂದೆ ಮೂರು ದಿನಗಳಿಂದ ಪ್ರತಿಭಟನೆ ನಡೆಸಲಾಯಿತು ಆದರೆ ಅಧಿಕಾರಿಗಳು ಕ್ಯಾರೆ ಎನ್ನದ ಕಾರಣ ಇಂದು ತಹಶಿಲ್ದಾರ್ ಕಚೇರಿ ಮುತ್ತಿಗೆ ಹಾಕುವ ಮೂಲಕ ಆಕ್ರೋಶ ಹೊರಹಾಕಿದರು.
ಇನ್ನೂ ಸ್ಥಳೀಯ ಆಗಮಿಸಿದ ತಹಶಿಲ್ದಾರ್ ರೇಹಾನ್ ಪಾಷ, ಹಾಗೂ ಇಓ ಶಶಿಧರ್ , ಬೇಟಿ ನೀಡಿ ನಿಮ್ಮ ಬೇಡಿಕೆಯನ್ನು ಪರಿಸಿಲಿಸಿ ಇತ್ಯರ್ಥಗೊಳಿಸಲು ವಿಶೇಷ ತಂಡ ರಚನೆ ಮಾಡಿದೆ , ಅದರಂತೆ ವರದಿ ಬಂದ ನಂತರ ಬಿಲ್ ಬಾಕಿ ಇದೆ ಎಂಬ ನಿಮ್ಮ ಆರೋಪ ಹಾಗೂ ಪಿಡಿಓ ವರದಿ ಆದರಾದ ಮೇಲೆ ನಿಮಗೆ ನ್ಯಾಯದೊರಕಿಸಲಾಗುವುದು ಎಂದು ಇಓ ಶಶಿಧರ್ ಹೇಳಿದರು. ಸ್ಥಳದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್, ಪಿಎಸ್ಐ ಈರೇಶ್, ಸಿಬ್ಬಂದಿ ವರ್ಗ ಇದ್ದರು.


