ನಿವೇಶನಗಳಿಗಾಗಿ ಆಗ್ರಹಿಸಿ ತಾಲೂಕು ಪಂಚಾಯತ್ ಕಚೇರಿ ಮುಂಭಾಗದಲ್ಲಿ ಐದನೇ ದಿನ ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನೀಡಿ ಭರವಸೆ ಪ್ರತಿಭಟನೆ ಹಿಂಪಡೆದ ದಲಿತ ಕುಟುಂಬಸ್ಥರು.
ಜಿಲ್ಲಾಧಿಕಾರಿ ವೆಂಕಟೇಶ್ ಮನವಿ ಸ್ವೀಕರಿಸಿ ಮಾತನಾಡಿ ಜನಸಂಖ್ಯೆಗೆ ಅನುಗುಣವಾಗಿ ನಿವೇಶನ ಬಡಾವಣೆ ನಿರ್ಮಾಣದ ಜತೆಗೆ ಸ್ಮಶಾನ.ಶಾಲೆ. ಅಂಗನವಾಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಜಾಗ ನೀಸಲಿಟ್ಟು ಒಂದು ವಾರದೊಳಗೆ ಅರ್ಹ ಎಲ್ಲಾ ಫಲಾನುಭವಿಗಳಿಗೆ ನಡುವೆ ನಿವೇಶನ ನೀಡಲಾಗುವುದು.ಅರ್ಹ ದಲಿತ ಕುಟುಂಬಗಳಿಗೆ ಪ್ರತ್ಯೇಕ ಬಡಾವಣೆ ಮಾಡಿ ಒಂದು ವಾರದೊಳಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಈಗಾಗಲೆ ನಿವೇಶನಗಳ ಗುರುತಿಸುವ ಕಾರ್ಯ ಚುರುಕುಗೊಂಡಿದ್ದು ನಿವೇಶನ ವಿತರಣೆ ಮಾಡಲಾಗುವುದು ಪ್ರತಿಭಟನೆಯನ್ನು ಹಿಂಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡ ಹಿನ್ನೆಲೆ ಪ್ರತಿಭಟನೆಕಾರರು ಪ್ರತಿಭಟನೆ ಹಿಂಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ. ಜಿಪಂ ಸಿಇಒ ಡಾ.ಆಕಾಶ್. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರ್. ತಹಶೀಲ್ದಾರ್ ರೇಹಾನ್ ಪಾಷ. ತಾಪಂ ಇಒ ಶಶಿಧರ್. ಡಿವೈಎಸ್ಪಿ ಸತ್ಯನಾರಾಯಣರಾವ್. ಠಾಣಾಧಿಕಾರಿ ಕೆ.ಕುಮಾರ್.ಪಿಡಿಒ ದೇವರಾಜ್ ಇತರರಿದ್ದರು.

About The Author

Namma Challakere Local News
error: Content is protected !!