ಚಳ್ಳಕೆರೆ : ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಿದರೆ ಸಮಸ್ಯೆ ಉದ್ಬವಿಸುವುದಿಲ್ಲ, ಉದಾಸೀನ ಮಾಡಿದಾಗ ಮಾತ್ರ ಇಂತಹ ಪ್ರತಿಭಟನೆಗಳು ಜರುಗುತ್ತಿವೆ ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಅಧಿಕಾರಿಗಳು ನಿಮ್ಮ ಪಾಡಿಗೆ ನೀವು ಸುಮ್ಮನಿದ್ದರೆ ಮರ್ಯದೆ ಹೋಗುವುದು ನಮ್ಮದು, ಇಲ್ಲಿನ ಶಾಸಕರು ಯಾರು ಅವರ ಕೆಲಸ ಏನು ಎಂದು ಮಾಧ್ಯಮದಲ್ಲಿ, ಸೋಶಿಯಲ್ ಮಿಡಿಯಾದಲ್ಲಿ ರಾಜ್ಯದ ಜನತೆ ನೋಡಬೇಕಾ, ಇದರಿಂದ ಕಳೆದ 13 ವರ್ಷಗಳಿಂದ ಶಾಸಕರಾದವರು ನಾವು ಸಾರ್ವಜನಿಕರಿಂದ ಶಾಪ ಹಾಕಿಸಿಕೊಳ್ಳಬೇಕಾ, ಅಧಿಕಾರಿಗಳು ಮೌನವಹಿಸಬಹುದು ಅದರೆ ನಾನು ಸುಮ್ಮನಿರಲ್ಲ ಯಾರೇ ಹಾಗಲಿ ಯಾವುದೇ ಪಕ್ಷದವರು ಹಾಗಲಿ ಸಮಸ್ಯೆ ಅಂತ ಬಂದು ಶಾಮಿಲು ಹಾಕಿ ರಸ್ತೆ ಮೇಲೆ ಅಡುಗೆ ಮಾಡುವುದು ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳ ನೇರ ಹೊಣೆ ಯಾಗುತ್ತಿರಿ, ನಾನು ಪಕ್ಷ , ಪಾರ್ಟಿ ಅಂತಹ ನಿಮ್ಮ ಕಾನೂನಿಗೆ ಅಡ್ಡಿ ಬರುವುದಿಲ್ಲ, ಅಧಿಕಾರಿಗಳಿಗೆ ಸಂಪೂರ್ಣವಾಗಿ ಅಧಿಕಾರ ಇದೆ ಕಾನೂನು ಬದ್ದವಾಗಿ ಕೆಲಸ ಮಾಡಿ ಬಡಜನರ ರಕ್ಷಣೆಗೆ ಮುಂದಾಗಿ, ಒಂದು ವೇಳೆ ಪ್ರತಿಭಟನಾಕಾರರು ಮಾಡುತ್ತಿರುವ ನ್ಯಾಯ ಸಮ್ಮತವಾಗಿಲ್ಲವಾದರೆ ಕಾನೂನು ಕ್ರಮಜರುಗಿಸಿ , ಗ್ರಾಮ ಸಭೆಗೆ , ಗ್ರಾಮದಲ್ಲಿ ಅಡ್ಡಿ ಪಡಿಸುವವರ ಮೇಲೆ ಕಾನೂನು ಕ್ರಮಜರುಗಿಸಿ,
ಮಾಧ್ಯಮದಲ್ಲಿ ಸಮಸ್ಯೆ ಸುದ್ದಿ ಬಂದರೆ ಕೂಡಲೇ ಸಮಸ್ಯೆ ಪರಿಹಾರ ಮಾಡಿ, ನಗರಸಭೆ ವ್ಯಾಪ್ತಿಯಲ್ಲಿ ಚರಂಡಿ ರಸ್ತೆ, ಕಸದ ಸಮಸ್ಯೆ ಸೋಶಿಯಲ್ ಮಿಡಿಯಾದಲ್ಲಿ ನೋಡಬೇಕಾ, ಇನ್ನೂ ರೈತರು ಪರಿಹಾರಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆಯುತ್ತಿದ್ದಾರೆ, ಅಧಿಕಾರಿಗಳ ತಾಂತ್ರಿಕ ದೋಷ ಎಂದು ಹೇಳಿ ನುಣುಚಿಕೊಳ್ಳದೆ ರೈತರಿಗೆ ಪರಿಹಾರ ಕೊಡಿಸಿ ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಕಳೆದ 32 ವರ್ಷಗಳಿಂದ ಹಕ್ಕು ಪತ್ರ ನೀಡಿ ಭೂಮಿ ಕೊಟ್ಟಿಲ್ಲವೆಂದರೆ ನಮ್ಮ ತಾಲೂಕು ಆಡಳಿತಕ್ಕೆ ನಾಚಿಕೆಯಾಗುತ್ತದೆ, ಆದ್ದರಿಂದ ಅಧಿಕಾರಿಗಳು ಸನ್ನದರಾಗಬೇಕು, ಪ್ರತಿಭಟನೆ ಮಾಡುತ್ತಾರೆ ಎಂಬುದು ಗಮನಕ್ಕೆ ಬಂದರೆ ತಕ್ಷಣವೇ ಪರಿಹಾರ ಸೂಚಿಸಬೇಕು, ಗಂಜಿಗಟೆ ಗ್ರಾಮದಲ್ಲಿ ನಿವೇಶನದ ಹಕ್ಕು ಪತ್ರಕ್ಕೆ ನ.17 ರಂದು ಪ್ರತಿಭಟನೆ ಹಮ್ಮಿಕೊಳ್ಳುವ ಸಂಘಟನೆಯ ಕರೆಗೆ ಪೂರಕವಾಗಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನಿವೇಶನ ನೀಡಿ ಅನರ್ಹ ಫಲಾನುಭವಿಗಳಿಗೆ ಹಿಂಬರಹ ನೀಡಿ, ಆದ್ಯಗ್ಯೂ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮ ಜರುಗಿಸೊಣ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಕುಂದು ಕೊರೆತ ಸಭೆಗಳ ಮೂಲಕ ಬೇಡಿಕೆ ಪಟ್ಟಿ ತಯಾರಿಸಿ, ಸ್ಮಾಶನ, ನಿವೇಶನ ಈಗೇ ಎಲ್ಲಾವುಗಳನ್ನು ಪಟ್ಟಿಮಾಡಿಕೊಂಡು ಸಭೆಗೆ ಮಂಡಿಸಿ, ಇಲ್ಲವಾದರೆ ಪಿಡಿಓ ಗಳ ಮೇಲಾ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ಉಪಧಿಕ್ಷಕರಾದ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್,
ಆಫಾರ ಜಿಲ್ಲಾಧಿಕಾರಿ ಬಿಟಿ.ಕುಮಾರಸ್ವಾಮಿ, ತಹಶಿಲ್ದಾರ್ ರೇಹಾನ್ ಪಾಷ, ಇಓ.ಶಶಿಧರ್, ಪೌರಾಯುಕ್ತ ಜಗರೆಡ್ಡಿ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


