ಚಿತ್ರದುರ್ಗ: ಸೀಟು ಹಂಚಿಕೆ ಬಗ್ಗೆ ತನಿಖೆ ನಡೆಸಿ ನ್ಯಾಯ
ಒದಗಿಸಿ
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ
ಹೆಚ್. ಆಂಜನೇಯ ಅವರು, ಒಳಮೀಸಲಾತಿಯಲ್ಲಿ ಶಿಕ್ಷಣ ಮತ್ತು
ಉದ್ಯೋಗದಲ್ಲಿ ಎ ವರ್ಗಕ್ಕೆ ಪ್ರಥಮ ಆದ್ಯತೆ ನೀಡಬೇಕಿತ್ತು.
ಆದರೆ, ಎಂಬಿಬಿಎಸ್ ಮತ್ತು ಎಂಎಸ್ ಸೀಟು ಹಂಚಿಕೆ ವೇಳೆ
ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳು ಎ ಗುಂಪನ್ನು ಕಡೆಗಣಿಸಿ ಬಿ
ಮತ್ತು ಸಿ ಗುಂಪುಗಳಿಗೆ ಮನ್ನಣೆ ನೀಡಿವೆ ಎಂದು ಆರೋಪಿಸಿದರು.
ಈ ಕುರಿತು ತನಿಖೆ ನಡೆಸಿ, ನ್ಯಾಯ ಒದಗಿಸಿ ತಪ್ಪಿತಸ್ಥರಿಗೆ ಶಿಕ್ಷೆ
ನೀಡಬೇಕೆಂದು ಅವರು ಒತ್ತಾಯಿಸಿದರು.

