ಹೊಸದುರ್ಗ: ಕುಡಿವ ನೀರಿಗಾಗಿ ಕಸಪನಹಳ್ಳಿ
ಗ್ರಾಮಸ್ಥರ ಪರದಾಟ
ಹೊಸದುರ್ಗ ತಾಲೂಕಿನ ಕಸಪನಹಳ್ಳಿ ಗ್ರಾಮಸ್ಥರು ಕುಡಿಯುವ
ನೀರಿನ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ
ಘಟಕವಿದ್ದರೂ ಅದು ಪ್ರಯೋಜನಕ್ಕೆ ಬಾರದಂತಾಗಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಘಟಕವನ್ನು ಗ್ರಾಮ
ಪಂಚಾಯಿತಿಗೆ ವಹಿಸದ ಕಾರಣ ಕಳೆದ ಮೂರು ದಿನಗಳಿಂದ
ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಗ್ರಾಮಸ್ಥರು
ಮೂರ್ನಾಲ್ಕು ಕಿಲೋಮೀಟರ್ ದೂರ ಹೋಗಿ ವಾಹನಗಳಲ್ಲಿ
ನೀರು ತರಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೂ ಗ್ರಾಮ
ಪಂಚಾಯಿತಿ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

