ಸ್ವಾಮಿ ನಮ್ಮ ಶಾಲೆಗೆ ಶೌಚಾಲಯ ಹಾಗೂ ಕಾಂಪೌಂಡ್ ನಿರ್ಮಿಸಿಕೊಡುವಂತೆ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಹೌದು ಇದು ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿಯ ನಂದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥನಿಕ ಶಾಲೆಯಲ್ಲಿ ಶೌಚಾಯಲ ವಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆ ಮುಖಸ್ಯ ರಸ್ತೆಗೆ ಹೊಂದಿಕೊಂಡಿದ್ದು ವಾಹನಗಳ ದಟ್ಟೆಣೆ ಹೆಚ್ಚಿದೆ ಮತಹ ರಸ್ತೆಯಲ್ಲಿ ಮಲ ಮೂತ್ರ ವಿಸರ್ಜನೆಗೆ ಗಿಡಗಳ ಪೊದೆಗೆ ರಸ್ತೆ ದಾಟಿ ಹೋಗ ಬೇಕು.
ಶಾಲೆಗೆ ಕಾಂಪೌಂಡ್ ಗೋಡೆ ಇಲ್ಲದೆ ಕತ್ತಲದಲಾದಂತೆ ಶಾಲಾ ಆವರಣದಲ್ಲಿ ಕುಡುಕರೆ ಅಡ್ಡೆಯಾಗಿ ಕುಡಿದ ಬಾಟಲಿಗಳನ್ನು ಶಾಲಾ ಆವರಣದಲ್ಲೇ ಬಿಸಾಕಿ ಹೋಗುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಬಯಲು ಬಿರ್ದೆಸೆತಪ್ಪಿಸಲು ಶೌಚಾಲಯ ನಿರ್ಮಾಣ ಕಡ್ಡಾಯವಾಗಿದ್ದು ಮಕ್ಕಳ ಗ್ರಾಮ ಸಭೆ ನಡೆದರೂ ಸಹ ಮಕ್ಕಳಿಗೆ ಶೌಚಾಲಯ ಕಾಂಪೌಂಡ್ ಇಲ್ಲದೆ ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ.
ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಶೌಚಾಲಯ ಹಾಗೂ ಅಗತ್ಯ ಮೂಲ ಭೂತ ಸೌಲಭ್ಯ ಕಲ್ಪಿಸುವರೇ ಕಾದು ನೋಡ ಬೇಕಿದೆ.

