ಚಿತ್ರದುರ್ಗ: ಕುರುಡಿಹಳ್ಳಿಯಲ್ಲಿ ಭಾರಿ ಮಳೆ ಕನ್ನೇನಹಳ್ಳಿ ಕಾವಲ್ ರಸ್ತೆ ಬಂದ್.!
ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹೊಸಕಟ್ಟೆ ಹಾಗೂ ಚೆಕ್ ಡ್ಯಾಮ್ಗಳು ತುಂಬಿ ಅಪಾರದ ಪ್ರಮಾಣ ನೀರು ಹರಿದು ದೊಡ್ಡೇರಿಕೆರೆ ಸೇರುತ್ತಿದೆ. ಕುರುಡಿಹಳ್ಳಿಯಿಂದ ಕನ್ನೇನಹಳ್ಳಿ ಕಾವಲಿಗೆ ತೆರಳುವ ರಸ್ತೆ ಬಂದ್ ಆಗಿದ್ದು, ಕನ್ನೇನಹಳ್ಳಿ ಕಾವಲಿನಲ್ಲಿ ವಾಸ ಮಾಡುವ ನಾಲ್ಕು ಕುಟುಂಬದ ಮಕ್ಕಳಿಗೆ ಶಾಲೆಗೆ ಹೋಗಲು ಹರಿಯುವ ನೀರು ಅಡ್ಡಿಯಾಗಿದೆ.
ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಿದ ಕಾರಣ ಮಳೆಗಾಲದ ಸಮಯದಲ್ಲಿ ನೀರು ನಿಂತು ಸಂಚಾರ ಅಸಾಧ್ಯವಾಗುತ್ತಿದೆ. ಇದೀಗ ರಸ್ತೆ ಬಂದ್ ಆಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸರಿಯಾದ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

