ಚಳ್ಳಕೆರೆ :
ಪಿ ಮಹದೇವಪುರ ಗ್ರಾಮದಲ್ಲಿ ಶ್ರೀ ಮಂಜುನಾಥ ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಲಾಗಿತ್ತು
ಈ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಕಾರ್ಯಕ್ರಮಕ್ಕೆ ರಾತ್ರಿ ಹಗಲು ಕೆಲಸ ಮಾಡಿದ ಕೆಲವರನ್ನು ವೇದಿಕೆಯಲ್ಲಿ ಸ್ಮರಿಸಿಕೊಳ್ಳುತ್ತಾ ಶ್ರೀ ಮಂಜುನಾಥ ಸ್ವಸಹಾಯ ಸಂಘವು ಧಾರ್ಮಿಕವಾಗಿ ಮುನ್ನಡೆಯುತ್ತಾ ವೀರೇಂದ್ರ ಹೆಗ್ಗಡೆ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕ್ಷಮಿಸಬೇಕಾಗಿದೆ ಎಂದು ತಿಳಿಸಿದರು.
ಹಾಗೆ ಮಹದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ ಇಂಥ ಪುಣ್ಯದ ಕೆಲಸಗಳನ್ನು ಮಾಡುವುದರ ಮುಖಾಂತರ ಗ್ರಾಮಗಳಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಸಂಘವು ಶ್ರಮಿಸುತ್ತಿರುವುದು ತುಂಬಾ ಸಂತೋಷದಾಯಕ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ ರೈತ ಮುಖಂಡ ನಾಗರಾಜ್ ಎ, ಮಹದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರೇಶ್ , ಗೋವರ್ಧನ್, ನಾಗೇಂದ್ರಪ್ಪ, ಪ್ರವೀಣ್, ಅನಿಲ್ ಕುಮಾರ್ , ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ತ್ಯಾಗರಾಜ್, ಉಪಾಧ್ಯಕ್ಷರಾದ ಓಬಳೇಶ್, ಊರಿನ ಸಾರ್ವಜನಿಕರು ಮಹಿಳೆಯರು ಭಾಗವಹಿಸಿದ್ದರು

