ಚಳ್ಳಕೆರೆ : ವಾಸವಿ ಪಿಯು ಕಾಲೇಜ್ ಎದುರು ಶ್ರೀ ಇಸ್ಕಾನ್ ಭಕ್ತಿ ಕೇಂದ್ರ ಚಳ್ಳಕೆರೆ ಇವರಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಜಯಂತೋತ್ಸವ ಕಾರ್ಯಕ್ರಮ ಹೋಮ ಹವನ ಮತ್ತು ಮಕ್ಕಳಿಗೆ ವಿಧ್ಯರ್ಜನೆಗಾಗಿ ಹವಗ್ರಿಯ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬೆಂಗಳೂರು ನರಸಿಂಹಗಿರಿ ದಾರಿ ಇಸ್ಕಾನ್ ಸಂಸ್ಥೆಯ ಪ್ರಮುಖರಾದ ಮುರಳಿ ಮುರಾರಿ ದಾಸ್ (ಡಾಕ್ಟರ್ ಮಂಜುನಾಥ್ ರವರು ಇದ್ದರು.
ವಿದ್ಯ ಮತ್ತು ಜ್ಞಾನಾಭಿವೃದ್ಧಿಗಾಗಿ
ಶ್ರೀ ಲಕ್ಷ್ಮೀ ಹಯಗ್ರೀವ ಹೋಮ,
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ
ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ
ನಡೆಸಲಾಯಿತು.
ವಿದ್ಯಾರ್ಥಿಗಳನನ್ನು
ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಮಾನ್
ವೇಣಿ ಮಾಧವ ದಾಸರು ವಿದ್ಯೆಯ ಜೊತೆಗೆ
ಬದುಕಲು ಬೇಕಿರುವ ಕೌಶಲ್ಯ, ಮೌಲ್ಯ
ಶಿಕ್ಷಣ ಹಾಗೂ ಆಧ್ಯಾತ್ಮಿಕ ವಿಜ್ಞಾನದ
ಅವಶ್ಯಕತೆಗಳನ್ನು ತಿಳಿಸಿದರು.
ಇಸ್ಕಾನ್ ಶ್ರೀ
ನರಸಿಂಹ ಗಿರಿಧಾರಿ ಮಂದಿರದ ಹಿರಿಯ
ಭಕ್ತರಾದ ಶುದ್ಧ ನಿತಾಯ್ ದಾಸ, ರಾಮ
ಕಮಲೇಶ ದಾಸ, ಚಳ್ಳಕೆರೆ ನಗರಸಭೆ
ಸದಸ್ಯರಾದ ನೇತಾಜಿ ಪ್ರಸನ್ನ, ಪ್ರಗತಿ
ವಿದ್ಯಾಲಯದ ರಮೇಶ್, ಚಳ್ಳಕೆರೆಯ
ನಾಗರೀಕರಾದ ಜಗದೀಶಾಚಾರ್,
ಶ್ರೀನಿವಾಸಲು, ಚೈತನ್ಯ ಚಂದ್ರ ದಾಸ,
ಚೈತನ್ಯ ಯೋಗೇಶ ದಾಸ ಮುಂತಾದವರು
ಭಾಗವಹಿಸಿದ್ದರು.
ಮಹಾಬಾಹು ಅರ್ಜುನ
ದಾಸ- ಮತ್ತು ಭಾವಮಯಿ ಸುಭದ್ರ ದೇವಿ
ದಾಸಿ ರವರ ನೇತೃತ್ವದಲ್ಲಿ ಕಾರ್ಯಕ್ರಮದ
ಆಯೋಜನೆಯನ್ನು ಇಸ್ಕಾನ್ ಭಕ್ತಿ
ಕೇಂದ್ರದ ಭಕ್ತರು ಸಂಕೀರ್ತನೆ, ಸಾಂಸ್ಕೃತಿಕ
ಕಾರ್ಯಕ್ರಮಗಳು ಹಾಗೂ ಮಹಾಪ್ರಸಾದ
ವಿತರಣೆ ಗಳೊಂದಿಗೆ ನಡೆಸಿಕೊಟ್ಟರು.

