ಚಳ್ಳಕೆರೆ :
ಮೊಳಕಾಲ್ಮೂರು: ಗುಡ್ಡದ ಕುಸಿತ ನಿಯಂತ್ರಿಸಿ
ಮೊಳಕಾಲ್ಮುರಿನ ರಾಷ್ಟ್ರೀಯ ಹೆದ್ದಾರಿ 150 ಎ ನಲ್ಲಿರುವ
ಗುಡ್ಡ ಕುಸಿತಗೊಳ್ಳುತ್ತಿದ್ದು, ಕೂಡಲೇ ಅದನ್ನು ದುರಸ್ತಿ
ಮಾಡಬೇಕೆಂದು ಕೊಮ್ಮನಪಟ್ಟಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೊಳಕಾಲ್ಮೂರಿನಲ್ಲಿ ಮಾತಾಡಿ, ಗುಡ್ಡ ಕುಸಿತ ತಡೆಯದಿದ್ದರೆ
ಪ್ರಾಣ ಹಾನಿಗಳಾಗುತ್ತವೆ. ಸಾವಿರಾರು ವಾಹನಗಳು ಇದೇ
ಗುಡ್ಡದ ಪಕ್ಕದಲ್ಲಿರುವ ಎನ್ ಹೆಚ್ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ.
ಅವರಿಗೆ ಸುರಕ್ಷತೆಯಿಲ್ಲದಾಗಿದೆ. ಜೀವ ಭಯದಲ್ಲಿ
ಓಡಾಡುವಂತಾಗಿದೆ. ಅಧಿಕಾರಿಗಳು ಕೂಡಲೇ ಕುಸಿತ ತಡೆಯುವಲ್ಲಿ
ಮಂದಾಗಬೇಕೆಂದಿದ್ದಾರೆ.

