ಹಿರಿಯೂರು: ಮುಳುಗಡೆ ಪ್ರದೇಶ ನಿರ್ಮಾಣಕ್ಕೆ 124
ಕೋಟಿ ಪ್ರಸ್ತಾವನೆ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು
ಹಿರಿಯೂರಿನಲ್ಲಿ ಮಾತನಾಡಿ, ವಾಣಿವಿಲಾಸ ಸಾಗರದ
ಹಿನ್ನೀರಿನಿಂದ ಮುಳುಗಡೆಯಾಗಿರುವ ರಸ್ತೆ ಸೇತುವೆಗಳ ಪುನರ್
ನಿರ್ಮಾಣಕ್ಕಾಗಿ ಶಾಸಕ ಬಿಜಿ ಗೋವಿಂದ ಅವರು 124 ಕೋಟಿ
ರೂ. ಗಳ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಪರಿಹಾರಕ್ಕಾಗಿ 225 ಅರ್ಜಿಗಳು ಸ್ವೀಕೃತವಾಗಿದ್ದು, ಈ ಬಗ್ಗೆ
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಸಭೆಯಲ್ಲಿ
ಚರ್ಚಿಸಲಾಗುವುದು ಎಂದು ಅವರು ಹೇಳಿದರು.

