ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ಧಿಗೆ ನೂತನ ಅಧ್ಯಕ್ಷೆ ಶಿಲ್ಪಾ ಮುರುಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ನಗರದ ಸ್ವಚ್ಚತೆ ಇವರ ಧ್ಯೇಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ನಗರದ ನಗರಸಭೆ ಸಭಾಂಗಣದಲ್ಲಿ ನೂತನವಾಗಿ ನಗರಸಭೆ ಅಧ್ಯಕ್ಷೆ ಶಿಲ್ಪ ಮುರಳಿಧರ್ ಅವರ ಅವಿರೋಧ ಆಯ್ಕೆಯ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,

ಕಳೆದ ಮೂರು ಅವಧಿಗಳ ನನ್ನ ಶಾಸಕ ಅವಧಿಯಲ್ಲಿ ಇಡೀ ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿಗೆ ಶಗರಮಿಸಿದ್ದೆನೆ, ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳ ಕಟ್ಟಡಗಳು, ಸಮುದಾಯ ಭವನಗಳು, ಕಾಲೇಜು ಕಟ್ಟಡ ನಿರ್ಮಿಸುವ ಮೂಲಕ ಅತಿಹೆಚ್ಚಿನ ಅನುದಾನವನ್ನು ತಂದು ಬಯಲು ಸೀಮೆಯಲ್ಲಿ ಶಿಕ್ಷಣದ ಹಸಿರಿಕರಣ ಮಾಡಿದ್ದೇನೆ,

ಇನ್ನು ನಗರದ ಪ್ರಥಮ ಪ್ರಜೆಯಾದ ನಗರಸಭೆ ಅಧ್ಯಕ್ಷರು ನೂತನವಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ, ಇವರು ನಗರದ ಸ್ವಚ್ಛತೆಯ ಮೊದಲ ಧೈರ್ಯ ವಾಕ್ಯವೆಂದು ಪರಿಭಾವಿಸಿ, ಸಾರ್ವಜನಿಕರ ಕೆಲಸಗಳಿಗೆ ಹಾಗೂ ನಗರದ ಸ್ವಚ್ಛತೆಗೆ ಪಣತೊಡಲಿದ್ದಾರೆ.
ನಗರಸಭೆಯನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುವಂತೆ ಹೇಳಿದರು.

ಇನ್ನು ನಗರಸಭೆಯ ನೂತನ ಅಧ್ಯಕ್ಷೆ ಶಿಲ್ಪಾ ಮುರುಳಿ ಮಾತನಾಡಿ, ನನ್ನ ಅವಧಿಯಲ್ಲಿ ನಗರದ ಸ್ವಚ್ಛತೆ ಹಾಗೂ ನಗರದ 31 ವಾರ್ಡಗಳ ಸ್ವಚ್ಛತೆ ನೈರ್ಮಲೀಕರಣ, ಉದ್ಯಾನವನಗಳ ಅಭಿವೃದ್ಧಿ ಹೀಗೆ ಹತ್ತು ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ನಮಗಿರುವ ಕಡಿಮೆ ಕಾಲಾವಕಾಶದಲ್ಲಿ ಅತಿ ಹೆಚ್ಚಿನದಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಸದುದ್ದೇಶವನ್ನು ಹಾಕಿಕೊಂಡಿದ್ದೇವೆ, ಅದರಂತೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಡಿ.ಸುಧಾಕರ್, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆಸಿ ವೀರೇಂದ್ರ ಪಪ್ಪಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಅವರ ಸಹಕಾರದೊಂದಿಗೆ ಹಾಗೂ ನಗರಸಭೆಯ 31 ವಾರ್ಡ್ ಗಳ ಎಲ್ಲಾ ಸದಸ್ಯರುಗಳ ಸಹಕಾರದೊಂದಿಗೆ ನಗರಸಭೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ.

ಇನ್ನು ಈ ಖಾತೆ , ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅತಿ ಶೀಘ್ರದಲ್ಲೇ ಪರಿಹಾರ, ಸರ್ಕಾರದ ಕಾಲಮಿತಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಕಾಲ ವಿಳಂಬವಿಲ್ಲದೆ ಸರಿಯಾದ ಸಮಯಕ್ಕೆ ಅವರಿಗೆ ತಮ್ಮ ನಿವೇಶನ, ಈ ಖಾತೆ, ಕಂದಾಯ, ಇನ್ನಿತರ ಕೆಲಸಗಳನ್ನು ಮಾಡುವುದರ ಮೂಲಕ ನಗರದ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಕವಿತಾ ಬೋರಯ್ಯ , ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಸದಸ್ಯರಾದ ಹೊಯ್ಸಳ ಗೋವಿಂದ, ರಾಘವೇಂದ್ರ ,ಬಿಟಿ ರಮೇಶ್ ಗೌಡ, ಕೆ ವೀರಭದ್ರಯ್ಯ, ಸುಜಾತ , ಸುಮಾ ಭರವಣ್ಣ ,ಇನ್ನಿತರ ಸದಸ್ಯರುಗಳು ಸಾರ್ವಜನಿಕರು ಹಾಗೂ ಮುರಳಿ ಅಭಿಮಾನಿ ಬಳಗದ ವರ್ಗದವರು ಪಾಲ್ಗೊಂಡಿದ್ದರು.

ನೂತನ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರಳಿ ರವರ ಅವಿರೋಧ ಆಯ್ಕೆ ಸಂಭ್ರಮಾಚರಣೆಯು ತೆರೆದ ವಾಹನದಲ್ಲಿ ನಗರದ ನಗರಸಭೆ ಮುಖ್ಯ ದ್ವಾರದಿಂದ ಅಂಬೇಡ್ಕರ್ ವೃತ್ತ, ನೆಹರು ವೃತ್ತ ಹೀಗೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಕಾಂಗ್ರೆಸ್ ಭಾವುಟವನ್ನು ಹಿಡಿದು ಡೋಲು ಬಾರಿಸುವುದರ ಮೂಲಕ ಮೆರವಣಿಗೆಯ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿದ್ದಾರೆ.

ಇನ್ನು ಚುನಾವಣಾ ಅಧಿಕಾರಿಗಳಾಗಿ ಕರ್ತವ್ಯ ನಿರ್ಮಿಸಿದ ಜಿಲ್ಲಾ ಉಪ ವಿಭಾಗ ಅಧಿಕಾರಿ ಮೊಹಮ್ಮದ್ ಜಿಲಾನಿ ಕುರೇಶಿ,ತಹಶಿಲ್ದಾರ್ ರೇಹಾನ್ ಪಾಷಾ, ಪೌರಾಯುಕ್ತ ಜಗ ರೆಡ್ಡಿ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು

ಫೋಟೋ : ಚಳ್ಳಕೆರೆ ನಗರಸಭೆ ನೂತನ ಅಧ್ಯಕ್ಷರಾಗಿ ಶಿಲ್ಪ ಮುರಳಿ ಅವಿರೋಧವಾಗಿ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ಸಂಭ್ರಮಾಚರಣೆಯ ಮಾಡಲಾಯಿತು.

About The Author

Namma Challakere Local News
error: Content is protected !!