ಚಳ್ಳಕೆರೆ : ಶಿಮುಲ್ ನಿಂದ ಹಾಲಿನ ಉತ್ಪನ್ನ ವಸ್ತುಗಳನ್ನು ನಗರದ ಜನತೆಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಹಾಗೂ ಶಾಸಕ ಟಿ ರಘುಮೂರ್ತಿ ಹೇಳಿದರು.
ಅವರು ನಗರದಲ್ಲಿ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ವತಿಯಿಂದ ಚಳ್ಳಕೆರೆ ನಗರದ ಆದರ್ಶ ವಿದ್ಯಾಲಯದ ಆವರಣ, ನಾಯಕನಹಟ್ಟಿ ಕ್ರಾಸ್, ಸರ್ಕಾರಿ ಆಸ್ಪತ್ರೆ ಆವರಣ ಮತ್ತು ಹೆಚ್.ಪಿ.ಪಿ.ಸಿ.ಕಾಲೇಜು ಆವರಣದಲ್ಲಿ ನಡೆದ ನೂತನ ನಂದಿನಿ ಮಿಲ್ಕ್ ಪಾರ್ಲರ್ ಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು, ಹೈನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಶಿಮುಲ್ ಒಕ್ಕೂಟ ಸಹಕಾರ ಸಂಘ ಹಾಲಿನ ಉತ್ಪಾದನೆ ಹಾಗೂ ಉತ್ಪನ್ನ ಮಾರಾಟ ಮಾಡುವ ಮೂಲಕ ಶಿಮುಲ್ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರೆಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಶಿಮುಲ್ ಅಧ್ಯಕ್ಷರಾದ ಹೆಚ್.ಎನ್.ವಿದ್ಯಾಧರ, ನಿರ್ದೇಶಕರಾದ ಬಿಸಿ ಸಂಜೀವಮೂರ್ತಿ, ಶೇಖರಪ್ಪ, ರೇವಣ ಸಿದ್ದಪ್ಪ, ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ.ಶೇಖರ್, ಮುಖಂಡರಾದ ಖಾದರ್, ಬೋರಣ್ಣ, ಶೇಖರಪ್ಪ, ಗುರುಮೂರ್ತಿ, ಶ್ರೀನಿವಾಸ, ಬೋರಣ್ಣ, ಕಾರ್ತಿಕ್ ಎಸ್.ಮೂರ್ತಿ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಪೋಟೋ : ಚಳ್ಳಕೆರೆ ನಗರದ ಹೆಚ್ ಪಿಪಿ ಸಿ ಪ್ರಥಮ ದರ್ಜೆ ಕಾಲೇಜು ಸಮೀಪ ನಂದಿನಿ ಮಿಲ್ಕ್ ಪಾರ್ಲರ್ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ. ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ..

