ಚಳ್ಳಕೆರೆ ‌:

ಬಯಲು ಸೀಮೆಯಲ್ಲಿ ಹಸಿರುಕರಣಕ್ಕೆ ಪಣತೊಟ್ಟ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಳೆದ ಮೂರು ಬಾರಿ ಶಾಸಕ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರದಲ್ಲಿ ಹೊಸ ಚಾಪು ಮೂಡಿಸಿದ್ದಾರೆ.

ಚಳ್ಳಕೆರೆ ತಾಲೂಕಿಗೆ ಎರಡು ಬ್ಯಾರೇಜ್ ಗಳ ನಿರ್ಮಾಣಕ್ಕೆ
ಅನುಮೋದನೆ ದೊರೆತ ಹಿನ್ನಲೆಯಲ್ಲಿ ಸಂಸತ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ
ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಚಳ್ಳಕೆರೆ ಕ್ಷೇತ್ರಕ್ಕೆ
ಭರ್ಜರಿ ಕೊಡುಗೆ‌ ನೀಡಿದ್ದಾರೆ.

ತಾಲೂಕಿನ ಗೋಸಿಕೆರೆ ಗ್ರಾಮದ ಸಮೀಪ
ವೇದಾವತಿ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ 34.50 ಕೋಟಿ
ವೆಚ್ಚದ ಕಾಮಗಾರಿ ಇದಾಗಿದೆ.
ಇದರಿಂದ ಬ್ಯಾರೇಜ್ ಸುತ್ತಮುತ್ತಲಿನ ವಡೇರಹಳ್ಳಿ, ಬೊಂಬೇರಹಳ್ಳಿ,
ಕಸ್ತೂರಿ ತಿಮ್ಮನಹಳ್ಳಿ, ದ್ಯಾವರಹಳ್ಳಿ, ದೇವರ ಮರಿಕುಂಟೆ ಗ್ರಾಮಗಳಿಗೆ
ಕುಡಿಯುವ ನೀರಿನ ಸೌಲಭ್ಯ, ಸಂಪರ್ಕ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ
ಅನುಕೂಲವಾಗಲಿದೆ.

ತೊರೆಬೀರೆನಹಳ್ಳಿ ಮತ್ತು ಬೆಳಗೆರೆ ಗ್ರಾಮಗಳ ನಡುವೆ ವೇದಾವತಿ
ನದಿಗೆ ಅಡ್ಡವಾಗಿ 28 ಕೋಟಿ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್
ನಿರ್ಮಾಣಕ್ಕೆ ಸಂಪುಟ ನಿರ್ಣಯಿಸಿದೆ. ಇದರಿಂದ ನಾರಾಯಣಪುರ,
ಕೋನಿಗರಹಳ್ಳಿ, ರಂಗನಾಥಪುರ ಗ್ರಾಮಗಳ ವ್ಯಾಪ್ತಿಗೆ ನೀರಾವರಿ
ಸೌಲಭ್ಯ ಹಾಗೂ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2013ರ ಮೊದಲು
ವೇದಾವತಿ ನದಿಗೆ ಅಡ್ಡಲಾಗಿ 2 ಬ್ಯಾರೇಜ್ ಗಳು ನಿರ್ಮಾಣವಾಗಿದ್ದವು.

2013ರ ಮೊದಲು ನಿರ್ಮಾಣವಾಗಿದ್ದ ನಾಗಗೊಂಡನಹಳ್ಳಿ, ಬ್ಯಾರೇಜ್
ಸಂಪೂರ್ಣ ಕೊಚ್ಚಿ ಹೋಗಿದ್ದು, ಅದೇ ಸ್ಥಳದಲ್ಲಿ ಸಣ್ಣ ನೀರಾವರಿ
ಇಲಾಖೆಯಿಂದ ಬ್ಯಾರೇಜ್ ನಿರ್ಮಿಸಲು ರೂ.8.50 ಕೋಟಿ
ಅನುದಾನದಡಿಯಲ್ಲಿ ಹೊಸದಾಗಿ ಬ್ಯಾರೇಜ್ ನಿರ್ಮಾಣ ಮಾಡಲು
ಅನುಮೋದನೆ ದೊರಕಿರುತ್ತದೆ.

2013ರ ನಂತರ ಶಾಸಕರಾದ ಟಿ.ರಘುಮೂರ್ತಿ ರವರು 5
ಬ್ಯಾರೇಜ್ ಗಳನ್ನು ನಿರ್ಮಾಣ ಮಾಡಿರುತ್ತಾರೆ.

ಸಂಪುಟ ಸಭೆಯಲ್ಲಿ ಚಳ್ಳಕೆರೆ ತಾಲೂಕಿಗೆ 2 ಬ್ಯಾರೇಜ್ ಗಳ
` ನಿರ್ಮಾಣಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳಾದ
ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಗಳಾದ
ಡಿ.ಕೆ.ಶಿವಕುಮಾರ್ ಅವರಿಗೆ ಬಯಲು ಸೀಮೆಯ ರೈತರು ಧನ್ಯವಾದಗಳು ಅರ್ಪಿಸಿದ್ದಾರೆ.

About The Author

Namma Challakere Local News
error: Content is protected !!