ಚಳ್ಳಕೆರೆ ; ದಿನೆ ದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು ನಗರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ನಗರದ ಆದರ್ಶ ಶಾಲೆ ಆವರಣದಲ್ಲಿ
ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರಕಾರಿ ಬಂಜರು ಭೂಮಿ, ರಸ್ತೆ ಬದಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅವುಗಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿ ಬರವನ್ನು ಹೋಗಲಾಡಿಸಲು ಹೆಚ್ಚು ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಮುಂದಾಗಬೇಕು, ನಗರದಲ್ಲಿ ಬಿಸಿಲಿನ ಜಳ ಹೆಚ್ಚಾಗಿದೆ ಆದರೆ ವಿಶಾಲವಾದ ರಸ್ತೆಯ ಜೋತೆಗೆ ಹಸಿರುಕರಣ ಮಾಡಲು ಸಾರ್ವಜನಿಕರು ಮುಂದಾಗಬೇಕು ಎಂದರು.

ಅರಣ್ಯಾಧಿಕಾರಿ ಮಂಜುನಾಥ್ ಮಾತನಾಡಿ ಬಯಲು ಸೇಮೆ ಎಂಬ ಹಣೆ ಪಟ್ಟಿಯ ಜತೆಗೆ ಬರಪೀಡಿತ ಪ್ರದೇಶ ಎಂಬ ಹೆಸರನ್ನು ಹೋಗಲಾಡಿಸಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಅವುಗಳು ಮೋಡಗಳ ಅಕರ್ಷಣೆ ಮಾಡಿಕೊಂಡು ಮಳೆ ಸುರಿಸುತ್ತವೆ , ಈಗಾಗಲೇ ಶಾಲಾ , ಕಾಲೇಜು ಆವರಣದಲ್ಲಿ, ರಸ್ತೆ ಪಕ್ಕದಲ್ಲಿ ಹಾಕಿದ ಬೇವು ಇತರೆ ಸಸಿಗಳು ಎತ್ತರಕ್ಕೆ ಬೆಳೆದಿದ್ದಾವೆ, ಸಾರಿಗೆ ಬಸ್ ಡಿಪೊ, ವಿದ್ಯಾರ್ಥಿನಿಲಯ, ಸರಕಾರಿ ಕಚೇರಿಗಳ ಆವರಣ ಹಾಗೂ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಹಾಕಿಕೊಳ್ಳಲು ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ನೂತನ ಅಧ್ಯಕ್ಷೆ ಶಿಲ್ಪಾ ಮುರುಳಿ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ,
ಸದಸ್ಯರಾದ ಕೆ.ಟಿ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ರಾಘವೇಂದ್ರ, ಕೃಷ್ಣಮೂರ್ತಿ, ಭರಮಣ್ಣ, ಅರಣ್ಯಧಿಕಾರಿ ದರ್ಶನ್, ರಾಜೇಶ್, ಇತರರಿದ್ದರು.

ಫೋಟೊ, : ಚಳ್ಳಕೆರೆ ನಗರದ ಆದರ್ಶ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಲಯ ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಶಾಸಕ ಟಿ.ರಘುಮೂರ್ತಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

About The Author

Namma Challakere Local News
error: Content is protected !!