ಚಳ್ಳಕೆರೆ :
ದಿನಾಂಕ: 23.03.2025 ಬಾನುವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯ ಘಟಕ-
1 ರ ವ್ಯಾಪ್ತಿಯಲ್ಲಿ ಬರುವ ಎಫ್-02 ಬೆಂಗಳೂರು ರಸ್ತೆ ಫೀಡರ್ನ ವ್ಯಾಪ್ತಿಯ ವಾಸವಿ ಕಾಲೇಜ್ ಹತ್ತಿರ
11ಕೆವಿ ಮಾರ್ಗದ ಕಂಬಗಳ ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ
66/11ಕೆವಿ ವಿದ್ಯುತ್
ವಿತರಣಾ ಕೇಂದ್ರ ಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-02
ಬೆಂಗಳೂರು ರಸ್ತೆ 11ಕೆವಿ.ಮಾರ್ಗದಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ
06:00 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ತಾವುಗಳು ಸಹಕರಿಸಬೇಕೆಂದು ಈ
ಮೂಲಕ ಕೋರಲಾಗಿದೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು:
ಚಳ್ಳಕೆರೆ ನಗರ ವ್ಯಾಪ್ತಿಯ ವಿಠಲನಗರ ಬೆಂಗಳೂರು ರಸ್ತೆ, ನಗರಂಗೆರೆ ಪಂಚಾಯ್ತಿ, ವ್ಯಾಪ್ತಿಯ ನಗರಂಗೆರೆ
ನರಹರಿನಗರ ಲಕ್ಷ್ಮೀಪುರ ಸಿದ್ದಾಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಎಂದು ಎಇಇ ಶಿವಪ್ರಸಾದ್ ತಿಳಿಸಿದ್ದಾರೆ.


