ಚಳ್ಳಕೆರೆ :

ಗ್ರಾಮಗಳ ಪಕ್ಕ ಗುಡ್ಡ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶ ಹೊಂದಿಕೊಂಡಿರುವಂತ ಪ್ರದೇಶಗಳನ್ನು ಗುರುತಿಸಿ ಪ್ರವಾಸಿ ತಾಣಗಳಾಗಿ ಮಾರ್ಪಡಿಸಲು ಕಡತಗಳನ್ನು ಕಳಿಸಿದರೆ ಶೀಘ್ರವೇ ಮಂಜೂರು ಮಾಡಿಸಿ‌ ಅಭಿವೃದ್ಧಿ ಪಡಿಸುವೆ ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನಿಂದ
ರಾಂಪುರ ಗ್ರಾಮದಲ್ಲಿ ನಡೆಯುವ ಖಾಸಗಿ
ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಮಧ್ಯೆ ಚಳ್ಳಕೆರೆ
ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರ
ಮುಖಂಡರ ಹಾಗೂ ಅರಣ್ಯಾಧಿಕಾರಿಗಳೊಂದಿಗೆ
ಮಾತನಾಡುವ ಸಂದರ್ಭದಲ್ಲಿ ಮಾತನಾಡಿದರು.

ನನ್ನಿವಾಳ ಗ್ರಾಮ ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸಿ
ತಾಣ ಮಾಡುವ ಜತೆಗೆ ಗುಡ್ಡದಿಂದ ಕರಡಿ ಚಿರತೆ ಕಾಡು
ಪ್ರಾಣಿಗಳು ಗ್ರಾಮಕ್ಕೆ ಬರುತ್ತಿದ್ದು ಗ್ರಾಮಸ್ಥರು
ಆತಂಕಗೊಂಡಿದ್ದಾರೆ ಇದರ ರಕ್ಷಣೆ ಅಗತ್ಯ, ಆದ್ದರಿಂದ ಪ್ರವಾಸಿ ತಾಣ ವಾಗಿ ಮಾಡಿ ಅಭಿವೃದ್ಧಿ ಪಡಿಸಿ ಎಂದು
ನನ್ನಿವಾಳ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್ ,, ಹಾಗು ಇತರ ಸದಸ್ಯರು ಮನವಿ ಮಾಡಿಕೊಂಡರು.

ಇನ್ನೂ ತಾಲೂಕಿನ ಗೋಪನಹಳ್ಳಿ ಹಾಗೂ ಚಿಕ್ಕೇನಹಳ್ಳಿ
ಗ್ರಾಮದಲ್ಲಿ
ಅರಣ್ಯ ಇಲಾಖೆಗೆ ಸೇರಿದ ಭೂಮಿ ಒತ್ತುವರಿ ಬಗ್ಗೆ ದೂರು
ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ
ಎಂದು ಅರಣ್ಯ ಸಚಿವರ ಗಮನ ಸೆಳೆದಾಗ ಇದಕ್ಕೆ
ಪ್ರತಿಕ್ರಿಯಿಸಿದ ಸಚಿವರು ಪಹಣಿಯಲ್ಲಿ ಅರಣ್ಯ ಇಲಾಖೆ
ಎಂದು ನಮುದಾಗಿದ್ದರೆ ಕೂಡಲೆ ನಿರ್ದಾಕ್ಷಿಣ್ಯವಾಗಿ
ತೆರವುಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಖಡಕ್ಕಾಗಿ
ಸೂಚನೆ ನೀಡಿದರು .

ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗ, ಚಿತ್ರದುರ್ಗ.ಚಳ್ಳಕೆರೆ
ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

ವೀರಶೈವ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್
ಕಾರ್ಯಕರ್ತರು ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ
ಸನ್ಮಾನಿಸಿ ಗೌರವಿಸಿದರು.

About The Author

Namma Challakere Local News
error: Content is protected !!