ಚಳ್ಳಕೆರೆ : ರಾಜ್ಯಾದ್ಯಂತ
ದ್ವಿತಿಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಡು 27 ಪರೀಕ್ಷಾ ಕೇಂದ್ರಗಳಲ್ಲಿ 13142 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆದಿದ್ದಾರೆ..

ಚಿತ್ರದುರ್ಗದಲ್ಲಿ 15 ಪರೀಕ್ಷಾ ಕೇಂದ್ರ ಮೊಳಕಾಲ್ಮೂರಿನಲ್ಲಿ 2 ,ಹಿರಿಯೂರುನಲ್ಲಿ 4 ಚಳಕೆರೆಯಲ್ಲಿ ನಾಲ್ಕು ಹೊಸದುರ್ಗದಲ್ಲಿ 4 ಹೊಳಲ್ಕೆರೆಯಲ್ಲಿ2 ಸೇರಿದಂತೆ ಒಟ್ಟು 26 ಸುಸಜ್ಜಿತವಾದ ಸಿ ಸಿ ಕ್ಯಾಮೆರಾ ಅಳವಡಿಸಿರುವಂತಹ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆದಿದ್ದಾರೆ .

ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆ ಜಗದಂತೆ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರದಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು, ದ್ವಿತೀಯ ಪಿಯುಸಿ ಪರೀಕ್ಷೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಒಟ್ಟು ಹಂಚಿಕೆಯಾದ ಅಭ್ಯರ್ಥಿಗಳ ಸಂಖ್ಯೆ13692, ಇವರಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 13,142, ಗೈರು ಹಾಜರಾದ ವಿದ್ಯಾರ್ಥಿಗಳು 550,
ಎಂದು ಪಿಯು ಡಿಡಿಪಿ ಪುಟ್ಟಸ್ವಾಮಿ ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿ ಇರುವ ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಪರೀಕ್ಷೆ ಬರೆಯುವಂತ ವಿದ್ಯಾರ್ಥಿಗಳಿಗೆ ಕೊಂಚ ಕಸಿವಿಸಿಗೊಂಡಂತಹ ಪ್ರಕರಣಗಳು ಕಂಡು ಬಂದವು.

ಇನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಚ್ಚುವರಿಯಾಗಿ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕೊಠಡಿಗಳನ್ನು ಪರೀಕ್ಷಾ ಕೇಂದ್ರ ದೂರವಿರುವ ಕಾರಣ ಕೆಲ ಪರೀಕ್ಷಾರ್ಥಿಗಳು ದೂರದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಪೋಷಕರು ಇಲ್ಲದೆ ಪರದಾಡುವಂತಾಯಿತು.

ಇನ್ನೂ ಸರಕಾರಿ ಕಾಲೇಜ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಳಸಿಕೊಂಡಿರುವ ಬ್ಲಾಕ್ ಗಳ ಹೆಸರುಗಳು , ದಾರಿ ಮಾರ್ಗ ಸೂಚನ ಫಲಕಗಳು ಇಲ್ಲದೆ , ಕೇವಲ ನೆಪ ಮಾತ್ರಕ್ಕೆ ಮುಖ್ಯ ದ್ವಾರದ ಬಳಿ ನೋಟಿಸ್ ಬೋರ್ಡ್ ನಲ್ಲಿ ನಂಬರ್ ಗಳನ್ನು ಹಾಕಿರೋದು ಬಿಟ್ಟರೆ ಇರುವ ಕೊಠಡಿಗಳು ಮಾರ್ಗ ಹಾಗೂ ಬ್ಲಾಕ್ ಗಳ ನಂಬರ್ ಸೂಚನಾ ಫಲಕದಲ್ಲಿ ತೋರಿಸದೆ ಬಂದಂತಹ ಸುಮಾರು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಯಿತು. ಪರೀಕ್ಷಾರ್ಥಿಗಳು ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿಕೊಂಡು ಕೊನೆಯಲ್ಲಿ ಅವರ ನಂಬರ್ ಇರುವ ಕೊಠಡಿಗೆ ಹೋಗಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ಕಂಡುಬಂದಿತು.

ಕೆಲಕಾಲ ಕೊಠಡಿಯ ಬಾಗಿಲು ಓಪನ್ ಆಗದೇ ಇರುವ ಕಾರಣ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿ ಕೆಲಕಲ ಬಾಗಿಲ ಮುಂದೆ ನಿಂತುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು ತದನಂತರ ಪ್ರಾಧ್ಯಾಪಕರುಗಳು ಸಹಕಾರದಿಂದ ಕೊಠಡಿಯ ಬಾಗಿಲನ್ನು ತೆರೆದು ಪರೀಕ್ಷಾ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಬಿಡಲಾಯಿತು.

ಈ ಕಾಲೇಜಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

About The Author

Namma Challakere Local News
error: Content is protected !!