ಚಳ್ಳಕೆರೆ : ಪ್ರಸ್ತುತ ದಿನಗಳಲ್ಲಿ ಯುವತಿಯರು ಅರೋಗ್ಯದ ವಿಚಾರವಾಗಿ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಾರೆ ಅಂತಹ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆದು ಪರಿಹಾರ ಕಂಡುಕೊಳ್ಳಬಹುದು ಎಂದು ಎಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಜಿಎಸ್ ಮಂಜುನಾಥ್ ಹೇಳಿದರು.
ಅವರು ನಗರದ ಎಚ್ ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳಾ ಸಬಲೀಕರಣ ಘಟಕ ಪಿಎಂ .ಉಷಾ ಐ.ಕ್ಯೂ.ಎ.ಸಿ. ಸಿ ಜಿ ಎಸ್ ಆಸ್ಪತ್ರೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಆಪ್ತ ಸಮಾಲೋಚನಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು.
ಸಿ ಜಿ ಎಸ್ ಆಸ್ಪತ್ರೆಯ ವೈದ್ಯರು ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆರೋಗ್ಯದಲ್ಲಿ ಆಗುವಂತಹ ಏರುಪೇರುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಆರೋಗ್ಯ ವಿಚಾರ ಬಂದಾಗ ನಿರ್ಲಕ್ಷದೆ ವಹಿಸಿದೆ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳಬೇಕು ಹಾಗೂ ಅವರ ಸಲಹೆಗಳನ್ನು ಪಡೆದು ಅದರಂತೆ ನಡೆದುಕೊಂಡರೆ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ ಎಂದರು.
ಸಿ ಜಿ ಎಸ್ ಆಸ್ಪತ್ರೆ ಯ ವೈದ್ಯ ಪೂಜಾ ಆರ್, ಕಾಲೇಜಿನ ವಿದ್ಯಾರ್ಥಿನಿಯರಿಗೆ ಯುವತಿಯರಲ್ಲಿ ಆಗುವಂತಹ ಹಲವಾರು ಕಾಯಿಲೆಗಳ ಬಗ್ಗೆ ಮತ್ತು ಅವುಗಳ ಗುಣಗಳ ಬಗ್ಗೆ ಮತ್ತು ಬಾಲ್ಯ ವಿವಾಹಗಳ ತಡೆಗಟ್ಟುವ ವಿಧಾನ ಪ್ರಸೂತಿ ಸೇವೆಗಳು ಸ್ರೀರೋಗ ಶಸ್ತ್ರ ಚಿಕಿತ್ಸೆ ಲ್ಯಾಬೋರೇಟರಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಆರೋಗ್ಯದ ವಿಚಾರವಾಗಿ ಸಮಗ್ರವಾಗಿ ಮಾಹಿತಿ ನೀಡಿದರು..
ಈ ಸಂದರ್ಭದಲ್ಲಿ ಕಾಲೇಜಿನ ಐ.ಕೂ.ಎ.ಸಿ ನ ಸಂಚಾಲಕರಾದ ಚೆನ್ನಕೇಶವ ಹಾಗೂ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಇದ್ದರು….

