“ವಿನಯಮೂರ್ತಿ ಶಾರದಾಮಾತೆ”- ಯತೀಶ್ ಎಂ ಸಿದ್ದಾಪುರ ಅನಿಸಿಕೆ. ಚಳ್ಳಕೆರೆ-ಸಾಕ್ಷಾತ್ ಜಗಜ್ಜನನಿ ಸ್ವರೂಪಿಣಿಯಾದ ಶ್ರೀಮಾತೆ ಶಾರದಾದೇವಿಯವರು ವಿನಯವಂತಿಕೆಯ ಸಾಕಾರ ಮೂರ್ತಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಮತ್ತು ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್ ಅವರ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು.ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ವಿಶೇಷ ಭಜನೆ, ಸ್ವಾಮಿ ಪುರುಷೋತ್ತಮಾನಂದಜೀ ಅವರ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಬಿ.ಎಂ ಗೀತಾ ಸುಂದರೇಶ್ ದೀಕ್ಷಿತ್,ರಂಗಮ್ಮ, ಪ್ರಮೀಳ ಜಗದೀಶ್,ಜಯಮ್ಮ ನರಸಿಂಹಮೂರ್ತಿ, ತಿಪ್ಪಮ್ಮ ಉಮಾಶಂಕರ್, ಸರ್ವಮಂಗಳ ಶಿವಣ್ಣ,ಮೋಹಿನಿ ಸತ್ಯನಾರಾಯಣ, ಗಾಯತ್ರಿ,ಚಂದ್ರಕಲಾ, ಭಾರ್ಗವಿ,ರೂಪ, ಗೌರಮ್ಮ , ಸುವರ್ಣಮ್ಮ, ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

